Sunday, September 14, 2025

ಟಾಸ್ ಬಳಿಕ ಹ್ಯಾಂಡ್‌ಶೇಕ್‌ ಮಾಡಲ್ಲ: ಮೊದಲೇ ನಿರ್ಧಾರ ಮಾಡಿದ್ದ ಸೂರ್ಯಕುಮಾರ್‌ ಯಾದವ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ 2025ರ ಭಾರತ–ಪಾಕಿಸ್ತಾನ ರೋಚಕ ಪಂದ್ಯದಲ್ಲಿ ಅಭಿಮಾನಿಗಳ ಗಮನ ಸೆಳೆದ ಅಚ್ಚರಿಯ ಘಟನೆ ನಡೆದಿದೆ. ಸಾಮಾನ್ಯವಾಗಿ ಟಾಸ್ ಬಳಿಕ ಎರಡೂ ತಂಡಗಳ ನಾಯಕರು ಪರಸ್ಪರ ಕೈಕುಲುಕುವುದು ಕ್ರೀಡಾ ಸಂಪ್ರದಾಯ. ಆದರೆ ಈ ಬಾರಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕನೊಂದಿಗೆ ಹಸ್ತಲಾಘವ ಮಾಡದೇ ನೇರವಾಗಿ ಮೈದಾನದಿಂದ ಹೊರನಡೆದಿದ್ದಾರೆ. ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅಂಪೈರ್‌ಗಳಿಗೆ ತಂಡದ ಪಟ್ಟಿಯನ್ನು ನೀಡಿದರು, ವೀಕ್ಷಕರೊಂದಿಗೆ ಮಾತನಾಡಿದರು ಮತ್ತು ನಂತರ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿದರು. ಆದರೆ ಈ ಸಮಯದಲ್ಲಿ ಪಾಕಿಸ್ತಾನ ನಾಯಕನೊಂದಿಗೆ ಕೈಕುಲುಕದೇ ಇರುವ ನಿರ್ಧಾರ ಅವರು ತೆಗೆದುಕೊಂಡದ್ದು ಗಮನಾರ್ಹವಾಗಿತ್ತು.

ಸಾಮಾನ್ಯವಾಗಿ ನಡೆಯುವ ಸಂಪ್ರದಾಯ ಬದಲಾಗಿದೆ
ಕ್ರಿಕೆಟ್‌ನಲ್ಲಿ ಟಾಸ್ ವೇಳೆ ನಾಯಕರು ಪರಸ್ಪರ ಕೈಕುಲುಕುವುದು ಕ್ರೀಡಾ ಮನೋಭಾವದ ಒಂದು ಪ್ರತೀಕ. ಆದರೆ ಈ ಬಾರಿ ಆ ದೃಶ್ಯ ಕಾಣದೇ ಅಭಿಮಾನಿಗಳು ಅಚ್ಚರಿಗೊಳಗಾದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸಂಬಂಧಿಸಿದ ವೀಡಿಯೊಗಳು ಮತ್ತು ಫೋಟೋಗಳು ವ್ಯಾಪಕವಾಗಿ ವೈರಲ್ ಆಗುತ್ತಿದೆ

ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಪಂದ್ಯಕ್ಕೂ ಕೆಲವು ಗಂಟೆಗಳ ಮೊದಲು ತಂಡದ ಸದಸ್ಯರಿಗೆ, “ನಾನು ಪಾಕ್ ನಾಯಕನೊಂದಿಗೆ ಕೈಕುಲುಕುವುದಿಲ್ಲ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಏನೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರದಿದ್ದರೂ, ಈ ನಿರ್ಧಾರದಿಂದಾಗಿ ಕ್ರಿಕೆಟ್ ವಲಯದಲ್ಲಿ ಚರ್ಚೆ ಚುರುಕಾಗಿದೆ.

ಇದನ್ನೂ ಓದಿ