Monday, December 22, 2025

ಅಮೆರಿಕದ ಚಾರ್ಲಿ ಕಿರ್ಕ್ ಹತ್ಯೆಯ ಶಂಕಿತ ಆರೋಪಿ ಅರೆಸ್ಟ್? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ ಹತ್ಯೆಯ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ಕುರಿತು ಫಾಕ್ಸ್‌ ನ್ಯೂಸ್‌ಗೆ ಲೈವ್‌ ಸ್ಟುಡಿಯೋ ಸಂದರ್ಶನದಲ್ಲಿ ಟ್ರಂಪ್‌, ಶಂಕಿತ ಆರೋಪಿ ಸಿಕ್ಕಿಬಿದ್ದಿದ್ದಾನೆಂದು ನಾನು ಖಚಿತವಾಗಿ ಹೇಳಬಲ್ಲೆ. ಆರೋಪಿಗೆ ಹತ್ತಿರವಿದ್ದವರೇ ಆತನನ್ನು ಹಿಡಿದು ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಉತಾಹ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಅನಾಮಿಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕಿರ್ಕ್ ಸಾವನ್ನಪ್ಪಿದ್ದರು. ಅಲ್ಲಿನ ಗವರ್ನರ್ ಇದನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಕರೆದಿದ್ದಾರೆ. ಟ್ರಂಪ್ ಅವರ ಆಪ್ತ ಮತ್ತು ಕಟ್ಟಾ ಬಲಪಂಥೀಯ ಕಾರ್ಯಕರ್ತ ಕಿರ್ಕ್, ‘ಟರ್ನಿಂಗ್ ಪಾಯಿಂಟ್ USA’ ರಾಜಕೀಯ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದರು.

error: Content is protected !!