Sunday, October 26, 2025

ಕಲಬುರಗಿ ಸ್ವಾಭಿಮಾನಿ ಮಳಿಗೆಯಲ್ಲಿ ಸ್ವದೇಶಿ ವಸ್ತುಪ್ರದರ್ಶನ: ನಾಡಿಗೆ ’ಲೋಕಲ್ ಫಾರ್ ವೋಕಲ್’ ಸಂದೇಶ ರವಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಹಿನ್ನೆಲೆ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಕಲಬುರಗಿಯಲ್ಲಿ ಸ್ವಾಭಿಮಾನಿ ಸ್ವದೇಶಿ ಮಳಿಗೆ ಸ್ಥಾಪಿಸಿ, ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ.

ಸ್ವಾಭಿಮಾನಿ ಸ್ವದೇಶಿ ಮಳಿಗೆಯಲ್ಲಿ ಆಟಿಕೆ ವಸ್ತುಗಳು, ಗುಡಿ ಕೈಗಾರಿಕೆ ವಸ್ತುಗಳು, ಮಣ್ಣಿನ ಮಡಿಕೆಗಳು ಮತ್ತು ಕೈಮಗ್ಗದ ಹಾಸಿಗೆಗಳು, ದಿಂಬುಗಳು ಮತ್ತಿತರ ವಸ್ತುಗಳು ಲಭ್ಯವಿದೆ. ಮಳಿಗೆಯಲ್ಲಿ ಸ್ವದೇಶಿ ವಸ್ತುಗಳ ಪ್ರದರ್ಶನದ ಮೂಲಕ ನಾಗರಿಕರಲ್ಲಿ ಆತ್ಮನಿರ್ಭರ ಭಾರತದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಲೋಕಲ್ ಫಾರ್ ವೋಕಲ್ ಎಂಬ ಸಂದೇಶ ರವಾನಿಸಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ವಾಭಿಮಾನಿ ಸ್ವದೇಶಿ ಮಳಿಗೆ ಮಾಲೀಕ ಅನಿಲ್ ಕುಮಾರ್ ತಂಬಾಕ್ಕೆ, ಕಳೆದ 15 ವರ್ಷಗಳಿಂದ ಸ್ವದೇಶಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪರಿಸರಕ್ಕೆ ಪೂರಕ ಸ್ವದೇಶಿ ಉತ್ಪನ್ನಗಳ ಬಳಕೆಯಿಂದ ದೇಶದ ಆರ್ಥಿಕತೆ ಜೊತೆಗೆ ಆರೋಗ್ಯವೂ ವೃದ್ಧಿಯಾಗಲಿದೆ ಎಂದು ಹೇಳಿದರು.

ಸ್ವದೇಶಿ ಜಾಗರಣ ಸಮಿತಿ ಪ್ರಚಾರಕ ಮಹಾದೇವಯ್ಯ ಕರದಳ್ಳಿ, ಸ್ವದೇಶಿ ಜೀವನ ಶೈಲಿ ರಾಷ್ಟ್ರದ ಉನ್ನತಿಗಾಗಿ ಇರುವ ಶೈಲಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನಿತ್ಯ ಜೀವನದಲ್ಲಿ ಸ್ವದೇಶಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಹಿಳಾ ಗ್ರಾಹಕಿ ಪೂಜಾ ಕಮರಶೆಟ್ಟಿ, ಮಳಿಗೆಯಲ್ಲಿ ಸ್ವದೇಶಿ ವಸ್ತುಗಳು ಲಭ್ಯವಿದ್ದು, ಇವುಗಳ ಖರೀದಿಯಿಂದ ದೇಶದ ಆರ್ಥಿಕತೆ ವೃದ್ಧಿಗೆ ಸಹಾಯವಾಗಲಿದೆ ಎಂದರು.

error: Content is protected !!