ಹೊಸದಿಗಂತ ವರದಿ ಬಾಗಲಕೋಟೆ:
ಜಿಲ್ಲೆಯ ರಬಕವಿ ಬಳಬಟ್ಟಿ ತಾಲ್ಲೂಕಿನ ಬಂಡಿಗಣಿಮಠದ ಸ್ವಾಮೀಜಿ ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದು,ಲಕ್ಷಾಂತರ ಭಕ್ತರಲ್ಲಿ ದುಃಖ ಮೊಡಗಟ್ಟಿದೆ.
ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿ ನಿಧನರಾಗಿದ್ದು,ಶುಗರ್ ನಿಂದ ಬಳಲುತ್ತಿದ್ದ ಶ್ರೀಗಳು,ಕಳೆದ ಕೆಲವು ದಿನಗಳಿಂದ ಲಿವರ್ ಸಮಸ್ಯೆ ಅನಾರೋಗ್ಯ ಉಂಟಾಗಿತು.
ಬೆಳಗಾವಿ ಕೆಎಲ್‌ಇ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು.
ವೆಂಟಿಲೇಟರ್ ಮೇಲೆಯೇ ಇದ್ದ ಶ್ರೀಗಳು,ಚಿಕಿತ್ಸೆ ಫಲಕಾರಿ ಆಗದೆ ಲಿಂಗೈಕ್ಯ ಆಗಿದ್ದಾರೆ.
ದಾಸೋಹದ ಮೂಲಕವೇ ಹೆಸರು ವಾಸಿಯಾಗಿದ್ದ ಶ್ರೀಗಳು,ಇತ್ತೀಚೆಗೆ ಬಂಡಿಗಣಿಯಲ್ಲಿ ಸರ್ವಧರ್ಮ ಸಮಾವೇಶ ಶ್ರೀಗಳು ಆಯೋಜನೆ ಮಾಡಿದ್ದರು.ಅಕ್ಟೋಬರ್ 13 ರಂದು
ಸರ್ವಧರ್ಮ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಭಾಗವಹಿಸಿ,ಶ್ರೀಗಳ ಮಠದ ಬಗ್ಗೆ ಗುಣಗಾಣ ಮಾಡಿದ್ದರು.
ತ್ರಿವಿಧ ದಾಸೋಹಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ-2024ರ ಪ್ರಶಸ್ತಿ ಪುರಸ್ಕ್ರತರಾದ ಬಂಡಿಗಣಿಮಠದ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರಶ್ರೀ ಶುಕ್ರವಾರ ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜೀವ ತ್ಯಜಿಸಿದರು.ಲಕ್ಷಾಂತರ ಭಕ್ತರು ಶೋಕ ಸಾಗರದಲ್ಲಿ ಮುಳಗಿದ್ದಾರೆ.
ಹಲವು ದಿನಗಳಿಂದ ಯಕೃತ ಸಮಸ್ಯೆಯಿಂದ ಬಳಲುತ್ತಿದ್ದ ದಾನೇಶ್ವರಶ್ರೀಗಳಿಗೆ ಹುಬ್ಬಳ್ಳಿ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ 15 ದಿನಗಳಿಂದ ಚಿಕಿತ್ಸೆ ನಡೆದಿತ್ತು. ಜೀವನ್ಮರಣದ ಮಧ್ಯೆ ಶುಕ್ರವಾರ ವಿಧಿವಶರಾದರು.
ಶ್ರೀಗಳ ಅಂತ್ಯಕ್ರಿಯೆಗೆ ಸಕಲ ರೀತಿಯ ಸಿದ್ಧತೆಯನ್ನು ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕಮಠದಲ್ಲಿ ನಡೆಸಲಾಗುತ್ತಿದ್ದು, ಇಂದು ಶುಕ್ರವಾರ ರಾತ್ರಿ 10 ಗಂಟೆಯಿಂದ ಶನಿವಾರ ಸಂಜೆ 4 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
3 ಲಕ್ಷಕ್ಕು ಅಧಿಕ ಭಕ್ತರು ಸೇರುವ ಲಕ್ಷಣಗಳಿದ್ದು, ಸುಮಾರು ಒಂದುವರೆ ಸಾವಿರದಷ್ಟು ಪೊಲೀಸರಿಂದ ಶ್ರೀಮಠದಲ್ಲಿನ ಭಕ್ತರಿಗೆ ಬಂದೋಬಸ್ತ್ ಒದಗಿಸಲಾಗಿದೆ.

