April 11, 2026
Saturday, April 11, 2026
spot_img

Sweating | ಬೇಸಿಗೆಯಲ್ಲಿ ಬೆವರು ಮಾಮೂಲಿ, ಆದ್ರೆ ಮೂಗು ಮುಚ್ಚಿಕೊಳ್ಳುವಷ್ಟು ದುರ್ಗಂಧ ಮಾಮೂಲಿ ಅಲ್ಲ

ಬೇಸಿಗೆ ಬಂದ್ರೆ ಬೆವರು ಇಳಿಯೋದು ಮಾಮೂಲಿ. ದೇಹದ ತಾಪಮಾನವನ್ನು ಸಮತೋಲನದಲ್ಲಿಡಲು ದೇಹವೇ ಬೆವರು ಹೊರಹಾಕುತ್ತೆ. ಆದರೆ ಕೆಲವರಿಗೆ ಬೆವರು ಮಾತ್ರವಲ್ಲ, ಮೂಗು ಮುಚ್ಚಿಕೊಳ್ಳುವಷ್ಟು ದುರ್ಗಂಧವೂ ಬರುತ್ತದೆ. ಇದು ಕೇವಲ ಹವಾಮಾನದಿಂದ ಮಾತ್ರವಲ್ಲ, ದೇಹದ ಸ್ವಚ್ಛತೆ, ಆಹಾರ ಪದ್ಧತಿ ಹಾಗೂ ಬ್ಯಾಕ್ಟೀರಿಯಾ ಬೆಳವಣಿಗೆಯ ಪರಿಣಾಮವಾಗಿರಬಹುದು. ಬೆವರು ಸ್ವತಃ ವಾಸನೆಯಿಲ್ಲದದ್ದು. ಆದರೆ ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾಗಳು ಬೆವರನ್ನು ವಿಭಜಿಸಿದಾಗ ದುರ್ಗಂಧ ಉಂಟಾಗುತ್ತದೆ.

ದುರ್ಗಂಧಕ್ಕೆ ಕಾರಣಗಳೇನು?

  • ಸ್ವಚ್ಛತೆ ಕೊರತೆ: ಸರಿಯಾಗಿ ಸ್ನಾನ ಮಾಡದಿದ್ದರೆ ಬ್ಯಾಕ್ಟೀರಿಯಾ ಹೆಚ್ಚಾಗಿ ವಾಸನೆ ಬರುತ್ತದೆ.
  • ಅತಿಯಾದ ಬೆವರು: ಹೆಚ್ಚು ಬೆವರು ಬಿದ್ದಾಗ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ.
  • ಆಹಾರ ಪದ್ಧತಿ: ಹೆಚ್ಚು ಮಸಾಲೆ, ಬೆಳ್ಳುಳ್ಳಿ, ಈರುಳ್ಳಿ ಸೇವನೆಯೂ ವಾಸನೆಗೆ ಕಾರಣವಾಗಬಹುದು.
  • ಸಿಂಥೆಟಿಕ್ ಬಟ್ಟೆ: ಗಾಳಿ ಹರಿಯದ ಬಟ್ಟೆಗಳು ಬೆವರನ್ನು ಹಿಡಿದು ದುರ್ಗಂಧ ಹೆಚ್ಚಿಸುತ್ತದೆ.

ದುರ್ಗಂಧ ತಪ್ಪಿಸಲು ಏನು ಮಾಡಬೇಕು?

  • ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡುವುದು.
  • ಹತ್ತಿ ಬಟ್ಟೆಗಳನ್ನು ಧರಿಸುವುದು.
  • ಡಿಯೋಡರೆಂಟ್ ಅಥವಾ ಅಂಡರ್‌ಆರ್ಮ್ ಸ್ವಚ್ಛತೆಯನ್ನು ಕಾಪಾಡುವುದು.
  • ಸಾಕಷ್ಟು ನೀರು ಕುಡಿಯುವುದು.

ಬೇಸಿಗೆಯಲ್ಲಿ ಬೆವರು ಸಹಜವಾದರೂ ದುರ್ಗಂಧ ಹೆಚ್ಚು ಇದ್ದರೆ ದೇಹದ ಆರೈಕೆಯಲ್ಲಿ ಸ್ವಲ್ಪ ಗಮನ ಕೊಡುವುದು ಅಗತ್ಯ. ಸರಿಯಾದ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !