March 18, 2026
Wednesday, March 18, 2026
spot_img

ಟಿ20 ರ್‍ಯಾಂಕಿಂಗ್‌ । ನಂಬರ್ ಒನ್ ನಲ್ಲಿ ಅಭಿಷೇಕ್ ಶರ್ಮಾ: ಸಂಜು ಸ್ಯಾಮ್ಸನ್ ಗೆ ಎಷ್ಟನೇ ಸ್ಥಾನ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಟಿ20 ನೂತನ ರ್‍ಯಾಂಕಿಂಗ್‌ ಪ್ರಕಟವಾಗಿದ್ದು, ಭಾರತದ ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ಉತ್ತಮ ಏರಿಕೆ ಕಂಡಿದೆ.

ಪ್ರಸುತ್ತ ರ್‍ಯಾಂಕಿಂಗ್‌ ನಲ್ಲಿ ಟೀಮ್ ಇಂಡಿಯಾ ಯುವ ಆಟಗಾರ ಅಭಿಷೇಕ್ ಶರ್ಮಾ ನಂಬರ್ 1 ಸ್ಥಾನದಲ್ಲಿಯೇ ಇದ್ದು, ಇಶಾನ್ ಕಿಶನ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ತಿಲಕ್ ವರ್ಮಾ ಒಂದು ಸ್ಥಾನ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ 9ನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಇತ್ತ ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಂಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಒಂದು ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನು ಟಿ20 ಬೌಲಿಂಗ್ ರಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ನಂಬರ್ 1 ಸ್ಥಾನದಲ್ಲಿದ್ದು, ಭಾರತದ ವರುಣ್ ಚಕ್ರವರ್ತಿ ಎರಡನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !