March 6, 2026
Friday, March 6, 2026
spot_img

T20 ವಿಶ್ವಕಪ್: ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ ಪ್ರಶಸ್ತಿಗೆ 8 ಆಟಗಾರರ ಹೆಸರು! ನಮ್ಮವರು ಯಾರಿದ್ದಾರೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ 2026 ಟೂರ್ನಿ ಅಂತಿಮ ಹಂತಕ್ಕೆ ತಲುಪಿದ್ದು, ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆ ಬೀಳಲಿದೆ. ಇದರ ಮಧ್ಯೆ ಐಸಿಸಿ ಈ ಬಾರಿಯ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು ಎಂಟು ಆಟಗಾರರು ಈ ಗೌರವಕ್ಕಾಗಿ ಸ್ಪರ್ಧಿಸುತ್ತಿದ್ದಾರೆ.

ಇಂಗ್ಲೆಂಡ್ ತಂಡದ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಈ ಪಟ್ಟಿಯಲ್ಲಿ ಗಮನ ಸೆಳೆದಿದ್ದಾರೆ. ಅವರು 8 ಪಂದ್ಯಗಳಲ್ಲಿ 226 ರನ್ ಗಳಿಸುವುದರ ಜೊತೆಗೆ 9 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನದ ಆರಂಭಿಕ ಬ್ಯಾಟರ್ ಸಾಹಿಬ್‌ಝಾದ ಫರ್ಹಾನ್ 7 ಪಂದ್ಯಗಳಲ್ಲಿ 383 ರನ್ ಗಳಿಸಿ ಬಲವಾದ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಸೌತ್ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ 7 ಪಂದ್ಯಗಳಲ್ಲಿ 12 ವಿಕೆಟ್ ಪಡೆದರೆ, ನ್ಯೂಝಿಲೆಂಡ್‌ನ ಟಿಮ್ ಸೈಫರ್ಟ್ 8 ಪಂದ್ಯಗಳಲ್ಲಿ 274 ರನ್ ಕಲೆಹಾಕಿದ್ದಾರೆ. ಯುಎಸ್‌ಎ ತಂಡದ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಕೇವಲ 4 ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ:

ನ್ಯೂಝಿಲೆಂಡ್‌ನ ರಚಿನ್ ರವೀಂದ್ರ 11 ವಿಕೆಟ್ ಜೊತೆಗೆ 128 ರನ್ ಗಳಿಸಿ ಆಲ್‌ರೌಂಡರ್ ಪ್ರದರ್ಶನ ತೋರಿದ್ದಾರೆ. ಸೌತ್ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ 286 ರನ್ ಗಳಿಸಿದ್ದಾರೆ.

ಇದರ ಜೊತೆಗೆ ಟೀಮ್ ಇಂಡಿಯಾದ ಸಂಜು ಸ್ಯಾಮ್ಸನ್ ಕೇವಲ 4 ಪಂದ್ಯಗಳಲ್ಲಿ 232 ರನ್ ಗಳಿಸಿ, 201ರ ಸ್ಟ್ರೈಕ್ ರೇಟ್‌ನೊಂದಿಗೆ ಮಿಂಚಿದ್ದಾರೆ. ಈ ಎಂಟು ಆಟಗಾರರಲ್ಲಿ ಒಬ್ಬರಿಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ದೊರೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !