ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿದ್ದರೆ, ಕಿವೀಸ್ ಪಡೆ ತನ್ನ ಚೊಚ್ಚಲ ಪ್ರಶಸ್ತಿಗಾಗಿ ಹವಣಿಸುತ್ತಿದೆ.
ಆದರೆ, ಈ ಎಲ್ಲದರ ನಡುವೆ ಸಂಜು ಸ್ಯಾಮ್ಸನ್ ಕುರಿತಾದ ಒಂದು ಕುತೂಹಲಕಾರಿ ಅಂಕಿಅಂಶ ಭಾರತೀಯ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.
ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ ಕೇವಲ 26 ರನ್ ಬಾರಿಸಿದರೆ ಸಾಕು, ಭಾರತ ಗೆಲ್ಲುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಅವರ ವೃತ್ತಿಜೀವನದ ಈ ಅಚ್ಚರಿಯ ವಿಷಯ.
ಸಂಜು ಸ್ಯಾಮ್ಸನ್ ಈವರೆಗೆ ಆಡಿರುವ 61 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 16 ಬಾರಿ 25 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ವಿಶೇಷವೆಂದರೆ, ಸಂಜು 25+ ರನ್ ಗಳಿಸಿದ ಆ ಎಲ್ಲಾ 16 ಪಂದ್ಯಗಳಲ್ಲೂ ಭಾರತ ಜಯಭೇರಿ ಬಾರಿಸಿದೆ!
ಹೀಗಾಗಿ, ಫೈನಲ್‌ನಲ್ಲಿ ಸಂಜು ಬ್ಯಾಟ್‌ನಿಂದ ಕನಿಷ್ಠ 26 ರನ್ ಬಂದರೂ ಟೀಮ್ ಇಂಡಿಯಾ ಚಾಂಪಿಯನ್ ಆಗುವುದು ಖಚಿತ ಎಂಬ ಲೆಕ್ಕಾಚಾರ ಅಭಿಮಾನಿಗಳದ್ದಾಗಿದೆ.



