March 22, 2026
Sunday, March 22, 2026
spot_img

ಟಿ20 ವಿಶ್ವಕಪ್ | ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವಿನ ಶುಭಾರಂಭ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಟಿ20 ವಿಶ್ವಕಪ್ ನಲ್ಲಿ ಭಾರತ ಗೆಲುವಿನ ಶುಭಾರಂಭ ಮಾಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 29 ರನ್ ಅಂತರದಲ್ಲಿ ಜಯ ದಾಖಲಿಸಿತು.

ಭಾರತ ನೀಡಿದ್ದ 162 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಅಮೆರಿಕ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 130ರನ್ ಗಳಿಸಲಷ್ಟೇ ಶಕ್ತವಾಯಿತು.

ಯುಎಸ್ಎ ಪರ ಮಿಲಿಂಗ್ ಕುಮಾರ್ 34, ಸಂಜಯ್ ಕೃಷ್ಣಮೂರ್ತಿ 37 ಮತ್ತು ಶುಭಂ ರಂಜನೆ 30 ರನ್ ಗಳ ಹೊರತಾಗಿಯೂ ಉಳಿದ ಆಟಗಾರರು ತಂಡದ ಮುತ್ತ ಹೆಚ್ಚಿಸುವಲ್ಲಿ ವಿಫಲರಾದರು.

ಭಾರತದ ಪರ ಅರ್ಶ್ ದೀಪ್ ಸಿಂಗ್, ಮಹಮದ್ ಸಿರಾಜ್ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು. ವರುಣ್ ಚಕ್ರವರ್ತಿ 1 ವಿಕೆಟ್ ಪಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !