February 12, 2026
Thursday, February 12, 2026
spot_img

T20 ವಿಶ್ವಕಪ್‌ | ಕಿಶನ್, ಪಾಂಡ್ಯ ಭರ್ಜರಿ ಬ್ಯಾಟಿಂಗ್: ನಮೀಬಿಯಾಗೆ ಬಿಗ್ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕ ಸಿಡಿಸಿ ನಮೀಬಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಹೀಗಾಗಿ ಟೀಮ್ ಇಂಡಿಯಾ 209 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಕೇವಲ 2 ಓವರ್‌ಗಳಲ್ಲೇ 25 ರನ್ ಕಲೆಹಾಕಿತು. ಸಂಜು ಸ್ಯಾಮ್ಸನ್ 22 ರನ್‌ಗಳಿಸಿದರು. ಆದರೆ ಇಶಾನ್ ಕಿಶನ್ ತಮ್ಮ ಎಂದಿನ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ 7 ಓವರ್‌ಗಳಲ್ಲೇ 100ರ ಗಡಿ ದಾಟಿಸಿದರು. ಒಟ್ಟಾರೆ 24 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ಗಳ ಸಹಿತ 61 ರನ್‌ಗಳಿಸಿ 8ನೇ ಓವರ್‌ನಲ್ಲಿ ಔಟ್ ಆದರು.

3ನೇ ಕ್ರಮಾಂಕದಲ್ಲಿ ಬಂದ ತಿಲ್ ವರ್ಮಾ 21 ಎಸೆತಗಳಲ್ಲಿ 25, ನಾಯಕ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ 12 ರನ್‌ಗಳಿಸಿ ನಿರಾಶೆ ಅನುಭವಿಸಿದರು. ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 5ನೇ ವಿಕೆಟ್ ಜೊತೆಯಾಟದಲ್ಲಿ ದುಬೆ ಜೊತೆ ಸೇರಿ 39 ಎಸೆತಗಳಲ್ಲಿ 81 ರನ್ ಸೇರಿಸಿದರು. 28 ಎಸೆತಗಳನ್ನೆದುರಿಸಿದ ಪಾಂಡ್ಯ ತಲಾ 4 ಬೌಂಡರಿ, ಸಿಕ್ಸರ್‌ಗಳ ಸಹಿತ 52 ರನ್‌ಗಳಿಸಿದರು. ದುಬೆ 16 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 23 ರನ್‌ಗಳಿಸಿ ರಿಂಕು ಸಿಂಗ್ ಮಾಡಿದ ಎಡವಟ್ಟಿಗೆ ರನ್‌ಔಟ್ ಆದರು. ರಿಂಕು ಸಿಂಗ್ 6 ಎಸೆತಗಳಲ್ಲಿ ಕೇವಲ 1 ರನ್‌ಗಳಿಸಿ ಕಳಪೆ ಪ್ರದರ್ಶನ ತೋರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !