March 21, 2026
Saturday, March 21, 2026
spot_img

ಟಿ20 ವಿಶ್ವಕಪ್ | ನವನೀತ್ ಧಲಿವಾಲ್ ಹೋರಾಟ ವ್ಯರ್ಥ: ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ 9ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೆನಡಾ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 213 ರನ್‌ಗಳ ದೊಡ್ಡ ಮೊತ್ತವನ್ನು ದಾಖಲಿಸಿತು. ತಂಡದ ಪರ ಐಡನ್ ಮಾರ್ಕ್ರಾಮ್ 32 ಎಸೆತಗಳಲ್ಲಿ 59 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಡೇವಿಡ್ ಮಿಲ್ಲರ್ (39), ಟ್ರಿಸ್ಟಾನ್ ಸ್ಟಬ್ಸ್ (34) ಮತ್ತು ರಯಾನ್ ರಿಕಲ್ಟನ್ (33) ಪ್ರಮುಖ ಕೊಡುಗೆ ನೀಡಿದರು.

214 ರನ್‌ಗಳ ಗುರಿ ಬೆನ್ನಟ್ಟಿದ ಕೆನಡಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. 45 ರನ್‌ಗಳಲ್ಲೇ ನಾಲ್ಕು ವಿಕೆಟ್ ಕಳೆದುಕೊಂಡ ತಂಡವನ್ನು ನವನೀತ್ ಧಲಿವಾಲ್ ಮತ್ತು ಹರ್ಷ್ ಠಾಕರ್ ಸ್ವಲ್ಪ ಮಟ್ಟಿಗೆ ಸಮತೋಲನಕ್ಕೆ ತಂದರು. ಧಲಿವಾಲ್ 64 ರನ್‌ಗಳ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳಿಂದ ಸಮರ್ಪಕ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಕೆನಡಾ 8 ವಿಕೆಟ್ ಕಳೆದುಕೊಂಡು 156 ರನ್‌ಗಳಿಗೆ ಸೀಮಿತವಾಯಿತು.

ದಕ್ಷಿಣ ಆಫ್ರಿಕಾ ಪರ ಎನ್‌ಗಿಡಿ ನಾಲ್ಕು ವಿಕೆಟ್ ಪಡೆದು ಪಂದ್ಯಶ್ರೇಷ್ಠರಾದರು. ಮಾರ್ಕೊ ಜಾನ್ಸೆನ್ ಎರಡು ವಿಕೆಟ್ ಪಡೆದರೆ, ರಬಾಡ ಮತ್ತು ಬಾಷ್ ತಲಾ ಒಂದು ವಿಕೆಟ್ ಕಬಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !