February 1, 2026
Sunday, February 1, 2026
spot_img

ಟಿ20 ವಿಶ್ವಕಪ್‌ | ಭಾರತಕ್ಕೆ ಆಗಮಿಸಿದ ಪಾಕ್ ಆಟಗಾರರು! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಜಗತ್ತಿನ ಕಣ್ಣೆಲ್ಲಾ 2026ರ ಟಿ20 ವಿಶ್ವಕಪ್‌ ಮೇಲೆ ನೆಟ್ಟಿರುವ ನಡುವೆ, ಟೂರ್ನಿಯ ಸಂಭ್ರಮ ಈಗಾಗಲೇ ಆರಂಭವಾಗಿದೆ. ಭಾರತ–ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಮಹಾ ಟೂರ್ನಿಗೆ ವಿವಿಧ ರಾಷ್ಟ್ರಗಳ ತಂಡಗಳು ಕ್ರಮೇಣ ಆಗಮಿಸುತ್ತಿದ್ದು, ಅಮೆರಿಕ ಕ್ರಿಕೆಟ್ ತಂಡದ ಭಾರತ ಪ್ರವೇಶ ಗಮನ ಸೆಳೆದಿದೆ.

ಗಮನಾರ್ಹ ಸಂಗತಿಯೆಂದರೆ, ಅಮೆರಿಕ ತಂಡದಲ್ಲಿ ಪಾಕಿಸ್ತಾನಿ ಮೂಲದ ಶಯಾನ್ ಜಹಾಂಗೀರ್, ಅಲಿ ಖಾನ್ ಮತ್ತು ಮೊಹಮ್ಮದ್ ಮೊಹ್ಸಿನ್ ಕೂಡ ಇದ್ದು, ಅವರಿಗೆ ಸಹ ತಿಲಕವಿಟ್ಟು ಸ್ವಾಗತಿಸಲಾಯಿತು. ಈ ದೃಶ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆದಿವೆ.

ಇದು ಯುಎಸ್ಎಗೆ ಎರಡನೇ ಟಿ20 ವಿಶ್ವಕಪ್‌ ಆಗಿದ್ದು, ಚೊಚ್ಚಲ ಆವೃತ್ತಿಯಲ್ಲೇ ಸೂಪರ್ 8 ಹಂತ ತಲುಪಿದ್ದ ಸಾಧನೆಗೆ ಈ ಬಾರಿ ಪುನರಾವರ್ತನೆ ಮಾಡುವ ಗುರಿಯಿದೆ. ಮೋನಾಂಕ್ ಪಟೇಲ್ ನಾಯಕತ್ವದ ತಂಡವು ಗ್ರೂಪ್ ಎನಲ್ಲಿ ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ವಿರುದ್ಧ ಪೈಪೋಟಿ ನಡೆಸಲಿದೆ.

https://twitter.com/1spacerecorder/status/2017848910568636476?ref_src=twsrc%5Etfw%7Ctwcamp%5Etweetembed%7Ctwterm%5E2017848910568636476%7Ctwgr%5E17df5494365adc0d870d159db37733d4cdfdaffe%7Ctwcon%5Es1_c10&ref_url=https%3A%2F%2Ftv9kannada.com%2Fsports%2Fcricket-news%2F2026-t20-world-cup-usa-team-india-welcome-schedule-1143371.html

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !