March 18, 2026
Wednesday, March 18, 2026
spot_img

ಟಿ20 ವಿಶ್ವಕಪ್‌ | ಮೊದಲ ಸೂಪರ್‌-8 ಗೆ ಮಳೆ ಅಬ್ಬರ: ನ್ಯೂಜಿಲೆಂಡ್- ಪಾಕಿಸ್ತಾನ ಮ್ಯಾಚ್ ಕ್ಯಾನ್ಸಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನ ಆರಂಭಿಕ ಮೊದಲ ಸೂಪರ್‌-8 ನ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಗಿದೆ.ಮೀಸಲು ದಿನ ಇರದ ಕಾರಣ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ದುಕೊಂಡಿತು. ಆದರೆ ಪಂದ್ಯ ಆರಂಭದ ವೇಳೆ ಜೋರಾಗಿ ಮಳೆ ಸುರಿಯಲಾರಂಭಿಸಿತು.

ಅಂಪೈರ್‌ಗಳ ಪಂದ್ಯದ ಕಟ್‌-ಆಫ್ ಸಮಯವನ್ನು ಪ್ರಕಟಿಸಿದ್ದರು. ಆದರೆ ಟಾಸ್ ಬಳಿಕ ಎಂಟ್ರಿಕೊಟ್ಟ ವರುಣರಾಯ ಒಂದೇ ಒಂದು ಎಸೆತವನ್ನು ಎಸೆಯಲು ಅನುವು ಮಾಡಿಕೊಡಲಿಲ್ಲ. ಇದರ ಪರಿಣಾಮವಾಗಿ ಪಂದ್ಯವು ಒಂದೇ ಒಂದು ಎಸೆತವನ್ನು ಕಾಣದೆ ರದ್ದಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !