March 25, 2026
Wednesday, March 25, 2026
spot_img

T20 ವಿಶ್ವಕಪ್ ಸೆಮಿಫೈನಲ್: ನಾವು ಹೀನಾಯವಾಗಿ ಸೋತಿದ್ದೇವೆ ಎಂದ ಕೋಚ್ ಶುಕ್ರಿ ಕಾನ್ರಾಡ್

ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ದಾಪುಗಾಲಿಟ್ಟಿದ್ದ ಸೌತ್ ಆಫ್ರಿಕಾ ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭಾರೀ ನಿರಾಶೆ ಎದುರಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಎದುರು ಸೌತ್ ಆಫ್ರಿಕಾ 9 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.

ಪಂದ್ಯದ ನಂತರ ಮಾತನಾಡಿದ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್, ಈ ಸೋಲನ್ನು ‘ಚೋಕ್’ ಎಂದು ಕರೆಯಲಾಗುವುದಿಲ್ಲ ಎಂದರು. ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ತೋರಿಸಿದ್ದರೆ ಅದನ್ನು ಚೋಕ್ ಎಂದು ಹೇಳಬಹುದಿತ್ತು. ಆದರೆ ಈ ಪಂದ್ಯದಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:

ಅವರ ಮಾತಿನಲ್ಲಿ, ಇದು ಸರಳವಾಗಿ ಹೇಳುವುದಾದರೆ ತಂಡಕ್ಕೆ ಬಿದ್ದ ಗಟ್ಟಿಯಾದ ಪೆಟ್ಟು. ನಾವು ಅಷ್ಟೊಂದು ಹೀನಾಯವಾಗಿ ಸೋತಿದ್ದೇವೆ. ಉತ್ತಮ ಪ್ರದರ್ಶನದ ನಂತರವೂ ಸೆಮಿಫೈನಲ್‌ನಲ್ಲಿ ಸೋಲು ಕಂಡಿರುವುದು ಸೌತ್ ಆಫ್ರಿಕಾ ತಂಡ ಮತ್ತೊಮ್ಮೆ ನಿರಾಸೆ ಅನುಭವಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !