February 11, 2026
Wednesday, February 11, 2026
spot_img

ಟಿ20ಯ ಹೊಸ ರನ್ ಮಷೀನ್: ಅಲೆನ್ ಆರ್ಭಟಕ್ಕೆ ಅಭಿಷೇಕ್ ಶರ್ಮಾ ವಿಶ್ವ ದಾಖಲೆ ಪುಡಿಪುಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್‌ನ ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಟಿ20 ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕೇವಲ 2854 ಎಸೆತಗಳಲ್ಲಿ 5000 ರನ್ ಪೂರೈಸುವ ಮೂಲಕ, ಅವರು ಟೀಮ್ ಇಂಡಿಯಾದ ಉದಯೋನ್ಮುಖ ತಾರೆ ಅಭಿಷೇಕ್ ಶರ್ಮಾ ಅವರ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಯುಎಇ ವಿರುದ್ಧ ಚೆನ್ನೈನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಅಲೆನ್ ಈ ಸಾಧನೆ ಮಾಡಿದರು. ಆರಂಭಿಕನಾಗಿ ಕಣಕ್ಕಿಳಿದ ಅವರು ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.

ಗಳಿಸಿದ ರನ್: 84 (ಕೇವಲ 50 ಎಸೆತಗಳಲ್ಲಿ)

ಬೌಂಡರಿ/ಸಿಕ್ಸರ್: 5 ಫೋರ್ ಹಾಗೂ 5 ಭರ್ಜರಿ ಸಿಕ್ಸರ್

ಇದನ್ನೂ ಓದಿ:

ಈ ಹಿಂದೆ ಭಾರತದ ಅಭಿಷೇಕ್ ಶರ್ಮಾ 2898 ಎಸೆತಗಳಲ್ಲಿ 5 ಸಾವಿರ ರನ್ ಪೂರೈಸಿ ಅತಿ ವೇಗದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಅಲೆನ್ ಕೇವಲ 44 ಎಸೆತಗಳ ಅಂತರದಲ್ಲಿ ಆ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !