Friday, September 12, 2025

ತೆರಿಗೆ ವಂಚನೆ ಆರೋಪ: ಪೋಥಿಸ್ ಬಟ್ಟೆ ಶೋ ರೂಮ್​ಗಳ​​ ಮೇಲೆ ಐಟಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಪೋಥಿಸ್ ಬಟ್ಟೆ ಶೋ ರೂಮ್​​ ಮೇಲೆ ಶುಕ್ರವಾರ ಬೆಳಗ್ಗೆ ಐಟಿ ದಾಳಿ ನಡೆದಿದೆ.

ಮೈಸೂರು ರಸ್ತೆಯ ಟೆಂಬರ್ ಲೇಔಟ್​ನಲ್ಲಿರುವ ಪೋಥಿಸ್​ ಶೋ ರೂಮ್​ಗೆ 25ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದೆ.

ಗಾಂಧಿನಗರದಲ್ಲಿರುವ ಪೋಥಿಸ್​ ಶೋ ರೂಮ್ ಮೇಲೂ ದಾಳಿ ನಡೆದಿದೆ. ಪೋಥಿಸ್ ಮಳಿಗೆ ತಮಿಳುನಾಡು ಮೂಲದ ಉದ್ಯಮಿಗೆ ಸೇರಿದ್ದಾಗಿದ್ದು, ಹೀಗಾಗಿ ಚೆನ್ನೈಯಿಂದಲೇ ಐಟಿ ಅಧಿಕಾರಿಗಳು ಬಂದಿದ್ದಾರೆ.

ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆ ದಾಳಿ ನಡೆದಿದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದ ಪೋಥಿಸ್ ಬಟ್ಟೆ ಮಳಿಗೆಯ ಶೋ ರೂಮ್​ಗಳು ಬೆಂಗಳೂರು, ತಮಿಳುನಾಡು ಸೇರಿ ಹಲವು ಕಡೆ ಇವೆ.

ಇದನ್ನೂ ಓದಿ