ಹೊಸದಿಗಂತ ವರದಿ, ಯಾದಗಿರಿ:
ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷಾ ಹಿನ್ನೆಲೆ ಪರೀಕ್ಷಾ ಸಿಬ್ಬಂದಿ ಯಡವಟ್ಟಿನಿಂದ ಮಹಿಳೆಯರ ಕಾಲುಂಗುರ, ಗೆಜ್ಜೆ ತೆಗೆಸಿದ ಘಟನೆ ನಡೆದಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಗೆ ಬಂದ ಮಹಿಳೆಯರ ಕಾಲುಂಗುರ, ಗೆಜ್ಜೆ, ಬಳಿ ತೆಗೆಸಿದ್ದು, ಎರಡನೇ ಶಿಪ್ಟ್ ಗೆ ಬಂದ ಮಹಿಳಾ ಪರೀಕ್ಷಾರ್ಥಿಗಳ ಕಿವಿ ಓಲೆ, ಕಾಲುಂಗುರ, ಬಳೆ, ಗೆಜ್ಜೆ ತೆಗೆಸಿರುವುದು ಯಾದಗಿರಿ ನಗರದ ನಿವೇದಿತಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.
ಯಾದಗಿರಿಯ ರಾಚೋಟಿ ವೀರೇಶ್ವರ ದೇವಸ್ಥಾನದ ಬಳಿ ಇರುವ ಕಾಲೇಜಿನಲ್ಲಿ ಪರೀಕ್ಷಾ ಹಾಲ್ ಗೆ ಹೋಗುವ ಮುನ್ನವೇ ತೆಗೆಸಿ ಒಳಗೆ ಬಿಟ್ಟಿರುವುದು ಮಹಿಳೆಯರು, ವಿದ್ಯಾರ್ಥಿನಿಯರು ಆಕ್ರೋಶಕ್ಕೆ ಕಾರಣವಾಗಿದೆ.
ಪರೀಕ್ಷೆ ದೃಷ್ಠಿಯಿಂದ ತಮ್ಮ ತಮ್ಮ ಪೋಷಕರನ್ನು ಹುಡುಕಿ ಒಡವೆಗಳನ್ನು ಕೊಟ್ಟು ಒಳಗಡೆ ಮಹಿಳೆಯರು, ವಿದ್ಯಾರ್ಥಿನಿಯರು ತೆರಳಿದರು.

