Friday, September 26, 2025

ಸಮೀಕ್ಷೆ ಮಾಡುವ ಶಿಕ್ಷಕರಿಗೆ ಗೌರವ ಸಂಭಾವನೆ ಜೊತೆ ಮನೆಗೆ ಒಂದರಂತೆ 100 ರೂಪಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದೆಡೆ ಸರ್ವರ್ ಡೌನ್, ಮತ್ತೊಂದೆಡೆ ವರ್ಕ್ ಆಗದ ಆ್ಯಪ್, ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೂ ಸರ್ವೆ ಕಾರ್ಯ, ಗರ್ಭಿಣಿ, ಮಗು ಇರುವ ಶಿಕ್ಷಕಿಯರು, ಅಂಗವಿಕಲ ಶಿಕ್ಷಕರನ್ನೂ ಜಾತಿ ಸಮೀಕ್ಷೆಗೆ ಬಳಸಿಕೊಂಡಿದ್ದು, ಇದೀಗ ಸರ್ಕಾರ ಅವರಿಗೆ ಗುಡ್‌ನ್ಯೂಸ್‌ ನೀಡಿದೆ.

ಸಮಸ್ಯೆಗಳ ಸರಮಾಲೆಗಳ ನಡುವೆ ಜಾತಿಗಣತಿ ಕಾರ್ಯಕ್ಕೆ ಶಿಕ್ಷಕರು ನಿರಾಸಕ್ತಿ ತೋರುತ್ತಾ, ಗೈರುಹಾಜರಾಗ್ತಿರೋ ಹಿನ್ನಲೆಯಲ್ಲಿ ಅವರಿಗೆ ಗೌರವ ಸಂಭಾವನೆ ನೀಡಲು ಹಿಂದುಳಿದ ಹಕ್ಕುಗಳ ಆಯೋಗ ಮುಂದಾಗಿದೆ. ಗೌರವ ಸಂಭಾವನೆ ನಿಗದಿಗೊಳಿಸಿ ಹಿಂದುಳಿದ ಹಕ್ಕುಗಳ ಆಯೋಗ ಹಣ ಬಿಡುಗಡೆ ಮಾಡಿದೆ.

ರಾಜ್ಯಾದ್ಯಂತ ಸಮೀಕ್ಷೆ ಮಾಡುತ್ತಿರುವ 1 ಲಕ್ಷದ 20,728 ಶಿಕ್ಷಕರಿಗೆ ತಲಾ ಐದು ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಪ್ರತಿ ಮನೆ ಸಮೀಕ್ಷೆಗೆ 100 ರೂಪಾಯಿ‌ ನಿಗದಿ ಮಾಡಲಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಿಂದುಳಿದ ವರ್ಗಗಳ ಆಯೋಗ 60,36,40000 ರೂಪಾಯಿ ಹಣ ಬಿಡುಗಡೆ ಮಾಡಿದೆ.

ಇದನ್ನೂ ಓದಿ