Sunday, December 21, 2025

ನ್ಯೂಜಿಲೆಂಡ್ ಸರಣಿಗೆ ಟೀಮ್ ಇಂಡಿಯಾ ಅನೌನ್ಸ್: ಇಲ್ಲಿದೆ ವಿಶ್ವಕಪ್ ಆಡುವ 15 ಪ್ಲೇಯರ್ಸ್ ಪಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಬಹುನಿರೀಕ್ಷಿತ 8 ಪಂದ್ಯಗಳ ಸರಣಿಯು ಜನವರಿ 11 ರಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮೊದಲು ಏಕದಿನ ಪಂದ್ಯಗಳು ನಡೆಯಲಿದ್ದು, ಆ ನಂತರ ಟಿ20 ಸರಣಿ ಜರುಗಲಿದೆ. ವಿಶೇಷವೆಂದರೆ, ಇದೇ ತಂಡವು ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಭಾಗವಹಿಸಲಿದೆ.

ತಂಡದಲ್ಲಿ ಮಹತ್ವದ ಬದಲಾವಣೆಗಳು

ಟಿ20 ಸರಣಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್-ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉಪನಾಯಕನಾಗಿದ್ದ ಶುಭ್​ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಜಾಗಕ್ಕೆ ಇಶಾನ್ ಕಿಶನ್ ಮರಳಿದ್ದಾರೆ. ಇನ್ನು ಜಿತೇಶ್ ಶರ್ಮಾ ಬದಲಿಗೆ ಫಿನಿಶರ್ ರಿಂಕು ಸಿಂಗ್ ಸ್ಥಾನ ಪಡೆದಿದ್ದಾರೆ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಸರಣಿಯ ವೇಳಾಪಟ್ಟಿ
ಏಕದಿನ ಸರಣಿ (ಮಧ್ಯಾಹ್ನ 1:30ಕ್ಕೆ ಪ್ರಾರಂಭ)

ಜನವರಿ 11: ಮೊದಲ ಏಕದಿನ – ವಡೋದರಾ

ಜನವರಿ 14: ಎರಡನೇ ಏಕದಿನ – ರಾಜ್‌ಕೋಟ್

ಜನವರಿ 18: ಮೂರನೇ ಏಕದಿನ – ಇಂದೋರ್

ಟಿ20 ಸರಣಿ (ರಾತ್ರಿ 7:00ಕ್ಕೆ ಪ್ರಾರಂಭ)

ಜನವರಿ 21: ಮೊದಲ ಟಿ20 – ನಾಗ್ಪುರ

ಜನವರಿ 23: ಎರಡನೇ ಟಿ20 – ರಾಯ್ಪುರ

ಜನವರಿ 25: ಮೂರನೇ ಟಿ20 – ಗುವಾಹಟಿ

ಜನವರಿ 28: ನಾಲ್ಕನೇ ಟಿ20 – ವಿಶಾಖಪಟ್ಟಣ

ಜನವರಿ 31: ಐದನೇ ಟಿ20 – ತಿರುವನಂತಪುರಂ

error: Content is protected !!