ಹೊಸದಿಗಂತ ಡಿಜಿಟಲ್ ಡೆಸ್ಕ್: :
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಕಳೆದ ಕೆಲ ವರ್ಷಗಳಿಂದ ಆಯ್ಕೆ ಸಮಿತಿ ಕಡೆಗಣಿಸುತ್ತಾ ಬಂದಿದೆ. ಜನವರಿ 11ರಿಂದ ಆರಂಭಗೊಳ್ಳುತ್ತಿರುವ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಶಮಿ ಆಯ್ಕೆಯಾಗಿಲ್ಲ. ಈ ಮೂಲಕ ಶಮಿಗೆ ಮತ್ತೆ ಆಯ್ಕೆ ಸಮಿತಿ ಶಾಕ್ ಕೊಟ್ಟಿದೆ. ಇದರ ಬೆನ್ನಲ್ಲೇ ಎಲೆಕ್ಷನ್ ಕಮಿಷನ್ ಕೂಡ ಶಾಕ್ ನಡಿದೆ.
ಮತದರಾರ ಪಟ್ಟಿ ತೀವ್ರ ಪರಿಷ್ಕರಣೆ( SIR) ಸಂಬಂಧ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರ ಮೊಹಮ್ಮದ್ ಕೈಫ್‌ಗೆ ಸಮನ್ಸ್ ನೀಡಿದೆ. ಮೊಹಮ್ಮದ್ ಶಮಿ ಭರ್ತಿ ಮಾಡಿರುವ SIR ಫಾರ್ಮ್‌ನಲ್ಲಿ ಕೆಲ ವ್ಯತ್ಯಾಸಗಳಿವೆ. ಇಷ್ಟೇ ಅಲ್ಲ ದಾಖಲೆಗಳು, ಮಾಹಿತಿಗಳು ತಾಳೆಯಾಗುತ್ತಿಲ್ಲ. ಹೀಗಾಗಿ ಎಲೆಕ್ಷನ್ ಕಮಿಷನ್ ಸಮನ್ಸ್ ನೀಡಿದೆ.
ಮೊಹಮ್ಮದ್ ಶಮಿ ಮತದಾರರ ಚೀಟಿ ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್ ವಾರ್ಡ್ ನಂ.93ರಲ್ಲಿದೆ. ಇದು ರಶಬೆಹಾರಿ ವಿಧಾನಸಭಾ ಕ್ಷೇತ್ರದಡಿ ಬರಲಿದೆ. ಆದರೆ ಮೊಹಮ್ಮದ್ ಶಮಿ ಜನನ ಉತ್ತರ ಪ್ರದೇಶದ ಅಮೋರ ಜಿಲ್ಲೆಯಲ್ಲಿ. ಇತ್ತ ಶಮಿ ಭರ್ತಿ ಮಾಡಿರುವ ಅರ್ಜಿಯಲ್ಲಿ ಕೆಲ ವ್ಯತ್ಯಾಸಗಳು ಕಂಡು ಬಂದಿದೆ. ಹೀಗಾಗಿ ಅಧಿಕಾರಿಗಳ ಮುಂದೆ ಹಾಜರಾಗಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಮೊಹಮ್ಮದ್ ಶಮಿಗೆ ಚುನಾವಣಾ ಆಯೋಗ ನೀಡಿದ ಸಮನ್ಸ್‌ನಲ್ಲಿ ಜನವರಿ 5ರೊಳಗೆ ಚುನಾವಣಾ ಆಯೋಗ ಕಚೇರಿಗೆ ಹಾಜರಾಗಲು ಸೂಚಿಸಿತ್ತು. SIR ಕುರಿತು ಅಧಿಕಾರಿಗಳ ವಿಚಾರಣೆಗೆ ಹಾಜರಾಗಲು ಸಮನ್ಸ್‌ನಲ್ಲಿ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೆ ಮೊಹಮ್ಮದ್ ಶಮಿ ಹಾಜರಾಗಲು ಸಾಧ್ಯವಾಗಿಲ್ಲ.
ಚುನಾವಣಾ ಆಯೋಗ ಸಮನ್ಸ್ ಕುರಿತು ಮೊಹಮ್ಮದ್ ಶಮಿ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಸಂಬಂಧ ರಾಜ್‌ಕೋಟ್‌ನಲ್ಲಿರುವ ಕಾರಣ ಹಾಜರಾಗಲು ಸಾಧ್ಯವಾಗುತ್ತಿಲ್ಲ. ನೀವು ಸೂಚಿಸಿದ ಸಮಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಶಮಿ ಪತ್ರದ ಮೂಲಕ ಹೇಳಿದ್ದಾರೆ.
ಮೊಹಮ್ಮದ್ ಶಮಿ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರವನ್ನು ಆಯೋಗ ಪರಿಗಣಿಸಿದೆ. ಹೀಗಾಗಿ ಜನವರಿ 5ರ ಡೆಡ್‌ಲೈನ್ ದಿನಾಂಕವನ್ನು ಇದೀಗ ಜನವರಿ 9 ಹಾಗೂ ಜನವರಿ 11ಕ್ಕೆ ಹಾಜರಾಗುವಂತೆ ಸೂಚಿಸಿದೆ.


