ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026 ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಟಕ್ಕೆ ಇಂಗ್ಲೆಂಡ್ ಬೌಲರ್ಸ್ ಗಳು ಸುಸ್ತು ಆಗಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಅರ್ಧಶತಕ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 260 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಡಿಯಾಕ್ಕೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ತೆರೆದರು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇದರ ನಡುವೆ ಅಭಿಷೇಕ್ ಶರ್ಮಾ (9) ಮತ್ತೆ ನಿರಾಸೆ ಮೂಡಿಸಿದರು.
ಬಳಿಕ ಸಂಜು ಮತ್ತು ಇಶಾನ್ ಜೋಡಿ ಭಾರತ ತಂಡದ ರನ್ ಹೊಡೆ ಬಡಿ ಆಟವಾಡಿದರು. ಈ ಜೋಡಿ 2ನೇ ವಿಕೆಟ್ಗೆ 45 ಎಸೆತಗಳಲ್ಲಿ 97 ರನ್ಗಳ ಜೊತೆಯಾಟವಾಡಿದರು.
ಇಶಾನ್ ಕಿಶನ್ 18 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಔಟಾದರು. ಬಳಿಕ ಬಂದ ಶಿವಂ ದುಬೆ ಕೂಡ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಇತ್ತ ಸಂಜು ತಮ್ಮ ಬ್ಯಾಟಿಂಗ್ ಅರ್ಭಟವನ್ನು ಮುಂದುವರೆಸಿದರು. ಶತಕದತ್ತ ಮುನ್ನಗುತ್ತಿದ್ದ ಸಂಜು (89) ವಿಲ್ ಜ್ಯಾಕ್ ಸ್ಪಿನ್ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಬಿರುಸಿನ ಬ್ಯಾಟಿಂಗ್ ಮಾಡಿದ ಸಂಜು 42 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ಭಾರತ ತಂಡದ ಪರ ಗರಿಷ್ಠ ಸ್ಕೋರ್ ಎನಿಸಿಕೊಂಡರು.
ಸಂಜು ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ (11) ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇದರ ನಡುವೆ ಶಿವಂ ದುಬೆ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ನೆರವನಿಂದ 43 ರನ್ ಗಳಿಸಿ ದುರದೃಷ್ಟಕರ ರನೌಟ್ಗೆ ಬಲಿಯಾದರು. ತಿಲಕ್ ವರ್ಮಾ ಕೂಡ ಕೇವಲ 7 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.
ಕೊನೆಯಲ್ಲಿ ಅಬ್ಬರಿಸಿದ ಹ್ಯಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 27 ರನ್ ಗಳಿಸಿ ಔಟಾದರೆ, ಅಕ್ಸರ್ ಪಟೇಲ್ ತಂಡದ ಮೊತ್ತ ಹೆಚ್ಚಿಸಲು ಸಾಥ್ ನೀಡಿದರು.



