February 4, 2026
Wednesday, February 4, 2026
spot_img

ಕಿರಿ ವಯಸ್ಸಿನಲ್ಲಿ ವಿಶ್ವದಾಖಲೆ ಬರೆದ ಟೀಮ್ ಇಂಡಿಯಾ ಯುವ ಆಟಗಾರ ವೈಭವ್ ಸೂರ್ಯವಂಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಯುವ ತಂಡ ಮೂರು ಪಂದ್ಯಗಳ ಯೂತ್ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದು, ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಇದೀಗ ಇದರ ಫಲವಾಗಿ ಚೊಚ್ಚಲ ನಾಯಕತ್ವದ ಪಂದ್ಯದಲ್ಲಿ ಆಟಗಾರನಾಗಿ ವಿಫಲನಾದರೂ, ನಾಯಕನಾಗಿ ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿದ್ದಾರೆ. ದಕ್ಷಿಣ ಆಫ್ರಿಕಾ ಯುವ ತಂಡದ ವಿರುದ್ಧ ನಡೆದ ಮೊದಲ ಪಂದ್ಯವನ್ನು ಭಾರತ ತಂಡ ಡಕ್ವರ್ತ್​ ಲೂಯಿಸ್ ನಿಯಮದಡಿಯಲ್ಲಿ ಗೆಲುವು ಸಾಧಿಸಿತು. ಈ ಮೂಲಕ ವೈಭವ್ ವಿಶ್ವದಾಖಲೆಯೊಂದಕ್ಕೆ ಕೊರಳೊಡ್ಡಿದ್ದಾರೆ.

ಈ ಗೆಲುವಿನೊಂದಿಗೆ ವೈಭವ್ ಸೂರ್ಯವಂಶಿ ಏಕದಿನ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಭವ್ ಸೂರ್ಯವಂಶಿ 14 ನೇ ವಯಸ್ಸಿನಲ್ಲಿ ಯೂತ್ ಏಕದಿನ ಪಂದ್ಯವನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಇದರೊಂದಿಗೆ 15 ವರ್ಷ ಮತ್ತು 141 ದಿನಗಳ ವಯಸ್ಸಿನಲ್ಲಿ ನಾಯಕನಾಗಿ ಮೊದಲ ಪಂದ್ಯವನ್ನು ಗೆದ್ದ ಪಾಕಿಸ್ತಾನದ ಅಹ್ಮದ್ ಶೆಹಜಾದ್ ಅವರ ದಾಖಲೆಯನ್ನು ವೈಭವ್ ಮುರಿದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 300 ರನ್ ಗಳಿಸಿತು. ಆಟಗಾರನಾಗಿ ವಿಫಲರಾದ ವೈಭವ್ ಸೂರ್ಯವಂಶಿ ಕೇವಲ 11 ರನ್ ಗಳಿಸಿ ಔಟಾದರು. ಆದರೆ ಹರ್ವಂಶ್ ಪಂಗಾಲಿಯಾ ಅವರ 93 ಮತ್ತು ಆಂಬ್ರಿಸ್ ಅವರ 65 ರನ್‌ಗಳ ನೆರವಿನಿಂದ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಉತ್ತರವಾಗಿ, ದಕ್ಷಿಣ ಆಫ್ರಿಕಾ 27.4 ಓವರ್‌ಗಳಲ್ಲಿ 148 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವನ್ನು ಡಕ್‌ವರ್ತ್-ಲೂಯಿಸ್ ವಿಧಾನದ ಮೂಲಕ ಭಾರತ 25 ರನ್‌ಗಳಿಂದ ಗೆದ್ದುಕೊಂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !