February 5, 2026
Thursday, February 5, 2026
spot_img

TECH | ಕಾರ್ ಹತ್ತಿದ ತಕ್ಷಣ ಫೋನ್ ಚಾರ್ಜ್ ಗೆ ಸಿಕ್ಕಿಸುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ಸುದ್ದಿ ಓದ್ಲೇ ಬೇಕು ನೀವು

ಕಾರಿನಲ್ಲಿ ಪ್ರಯಾಣ ಮಾಡುವಾಗ ಫೋನ್ ಚಾರ್ಜ್ ಹಾಕೋದು ಸಾಮಾನ್ಯ ಅಭ್ಯಾಸವಾಗಿದೆ. ನಾವೆಲ್ಲರೂ ದಾರಿ ಮಧ್ಯೆ ಬ್ಯಾಟರಿ ಖಾಲಿಯಾಗದಂತೆ ಕಾರಿನ ಚಾರ್ಜರ್ ಬಳಸುತ್ತೇವೆ. ಆದರೆ ತಿಳಿಯದೇ ಮಾಡುವ ಕೆಲವು ಸಣ್ಣ ತಪ್ಪುಗಳು ನಿಮ್ಮ ಮೊಬೈಲ್‌ ಬ್ಯಾಟರಿ ಆರೋಗ್ಯಕ್ಕೆ ಹಾನಿ ಮಾಡಬಹುದು. ಕೆಲವೊಮ್ಮೆ ಫೋನ್ ನಿಧಾನವಾಗಿ ಹಾಳಾಗುವುದಕ್ಕೂ ಇದೇ ಕಾರಣವಾಗುತ್ತದೆ.

ಕಾರುಗಳಲ್ಲಿ ಕಡಿಮೆ ದರದ ಅಥವಾ ಬ್ರ್ಯಾಂಡ್ ಇಲ್ಲದ ಚಾರ್ಜರ್ ಬಳಸುವುದು ಹೆಚ್ಚು ಅಪಾಯಕರ. ಇವು ಸರಿಯಾದ ವೋಲ್ಟೇಜ್ ನೀಡದೇ ಬ್ಯಾಟರಿ ಮೇಲೆ ಒತ್ತಡ ಹೆಚ್ಚಿಸಬಹುದು. ಇದರಿಂದ ಫೋನ್ ಬೇಗ ಬಿಸಿ ಆಗಿ ಬ್ಯಾಟರಿ ಡ್ಯಾಮೇಜ್ ಆಗುವ ಸಾಧ್ಯತೆ ಇದೆ.

ಕಾರು ಸ್ಟಾರ್ಟ್ ಮಾಡದೇ ಚಾರ್ಜ್ ಹಾಕಿದರೆ ವಿದ್ಯುತ್ ಸರಿಯಾಗಿ ಹರಿಯದೆ ಫೋನ್ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಟರಿ ನಿಧಾನವಾಗಿ ಹಾಳಾಗಬಹುದು ಮತ್ತು ಚಾರ್ಜಿಂಗ್ ಸ್ಪೀಡ್ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ:

ಪ್ರಯಾಣದ ಸಮಯದಲ್ಲಿ ಚಾರ್ಜ್ ಹಾಕಿ, ಗಮ್ಯಸ್ಥಾನ ತಲುಪಿದ ಬಳಿಕವೂ ಅದನ್ನೇ ಹಾಗೇ ಬಿಡುವ ಅಭ್ಯಾಸ ಹಲವರಲ್ಲಿ ಇರುತ್ತದೆ. ಇದು ಬ್ಯಾಟರಿ ಲೈಫ್ ಕಡಿಮೆ ಮಾಡುವ ಪ್ರಮುಖ ಕಾರಣ.

ಕಾರು ಒಳಗಿನ ತಾಪಮಾನ ಹೆಚ್ಚಿರುತ್ತದೆ. ಈ ಸಮಯದಲ್ಲಿ ಚಾರ್ಜ್ ಮಾಡಿದರೆ ಫೋನ್ ಹೆಚ್ಚು ಬಿಸಿ ಆಗಿ ಒಳಗಿನ ಭಾಗಗಳಿಗೆ ಹಾನಿಯಾಗಬಹುದು.

ಒರಿಜಿನಲ್ ಕೇಬಲ್ ಅಥವಾ ಉತ್ತಮ ಗುಣಮಟ್ಟದ ಕೇಬಲ್ ಬಳಸಿದರೆ ಫೋನ್ ಸುರಕ್ಷಿತವಾಗಿರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !