ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರದಿಂದ ಚೆನ್ನೈಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ಭಾನುವಾರ ತಾಂತ್ರಿಕ ದೋಷದಿಂದಾಗಿ ಹಾರಾಟವನ್ನು ರದ್ದುಗೊಳಿಸಿದೆ .
A321 ವಿಮಾನದ ಬದಲಿಗೆ AI 349 ವಿಮಾನ ಚೆನ್ನೈಗೆ ತೆರಳಬೇಕಾಗಿತ್ತು. ಆದರೆ ನಿರ್ವಹಣಾ ಕಾರ್ಯದಿಂದಾಗಿ ಸಿಂಗಾಪುರದಿಂದ ಚೆನ್ನೈಗೆ ಹೊರಡಬೇಕಿದ್ದ AI349 ವಿಮಾನವನ್ನು ರದ್ದುಗೊಳಿಸಲಾಗಿದೆ. ಸರಿಪಡಿಸಲು ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದು ಏರ್‌ಲೈನ್ಸ್ ತಿಳಿಸಿದೆ.
‘ಪ್ರಯಾಣಿಕರು ಆದಷ್ಟು ಬೇಗ ಚೆನ್ನೈ ತಲುಪಲು ವ್ಯವಸ್ಥೆ ಮಾಡಲಾಗುವುದು. ಹೋಟೆಲ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸಂಪೂರ್ಣ ಮರುಪಾವತಿ ಅಥವಾ ಮರು ವೇಳಾಪಟ್ಟಿಯಲ್ಲಿ ಸಂಚರಿಸುವ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುವುದು’ ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ.