ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಧಾರಾವಾಹಿಗಳಲ್ಲಿ ನಟನೆಯಿಂದ ಗುರುತಿಸಿಕೊಂಡಿರುವ ಕಿರುತೆರೆ ನಟಿ ಆಶಾ ಜೋಯಿಸ್ ಮೇಲೆ ಬ್ಲ್ಯಾಕ್‌ಮೇಲ್ ಸಂಬಂಧಿ ಆರೋಪ ಕೇಳಿಬಂದಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಪಾರ್ವತಿಗೆ ಆಶಾ ಜೋಯಿಸ್ ಪರಿಚಯವಾಗಿದ್ದಳು. ಪಾರ್ವತಿ ತಾನು ಕೆಲಸ ಮಾಡುವ ಕಂಪನಿ ಮಾಲೀಕರನ್ನೇ ಮದುವೆಯಾಗಿದ್ದರು. ಈ ವಿಚಾರ ತಿಳಿದ ಆಶಾ ಪತಿಗೆ ಬ್ಲ್ಯಾಕ್ ಮೇಲ್ ಮಾಡಲು ಪದೇ ಪದೇ ಪ್ರಚೋದನೆ ನೀಡಿದ್ದಾಳೆ. ಎರಡು ಕೋಟಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಲು ಬಲವಂತ ಮಾಡಿದ್ದಾಳೆ. ಇದನ್ನ ಪಾರ್ವತಿ ನಿರಾಕರಿಸಿದ್ದರು.
ಇದೇ ಕಾರಣಕ್ಕೆ ಪಾರ್ವತಿ ಅವರ ಫೋನ್‌ನಿಂದ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಖಾಸಗಿ ಫೋಟೋಗಳನ್ನ ಕದ್ದು ಪಾರ್ವತಿ ಅವರ ಪರಿಚಯಸ್ಥರಿಗೆ ಕಳಿಸಿದ್ದಾಳೆ. ಈ ಹಿನ್ನೆಲೆ ತನ್ನ ಘನತೆಗೆ ಕುಂದುಂಟಾಗಿದೆ ಹಾಗೂ ತನ್ನ ಖಾಸಗಿ ಡೇಟಾ ಕದ್ದಿದ್ದಾರೆ ಎಂದು ಆರೋಪಿಸಿ ಪಾರ್ವತಿ ದೂರು ನೀಡಿದ್ದಾರೆ.

