‘ನಾನು ಯಾವಾಗ ನನ್ನ ಕನಸಿನ ಮನೆ ತಗೋಳೋದು, ನನ್ನ ಜೀವನ ಯಾವಾಗ ಬದಲಾಗೋದು ಅಮ್ಮ’ ಅಂತ ಹುಡುಗಿಯೊಬ್ಬಳು ಅಮ್ಮನಲ್ಲಿ ಕೇಳುತ್ತಾಳೆ. ಆಗ ಅಮ್ಮ ‘ನಾನು ಯಾವಾಗ ಅಂತ ಹೇಳ್ತೇನೆ. ಅದಕ್ಕೂ ಮುಂಚೆ ನಾನು ಇಲ್ಲಿ ಒಂದು ಗೇಮ್ಆಡ್ತಿದ್ದೇನೆ ಇದರಲ್ಲೊಂದು ಕಷ್ಟದ ಲೆವೆಲ್ ಇದೆ ಬಾ.. ನಂಗೆ ಹೆಲ್ಪ್ ಮಾಡು’ ಅಂತ ಅಮ್ಮ ಕರೀತಾರೆ.
ಹುಡುಗಿ ಫೋನ್ ತಗೊಂಡು ಫುಲ್ ಫೋಕಸ್ ಮಾಡಿ ಆಡೋಕೆ ಶುರು ಮಾಡ್ತಾಳೆ. ಆ ಕಷ್ಟದ ಲೆವೆಲ್ ಕೂಡ ಪಾಸ್ ಮಾಡ್ತಾಳೆ. ಅವಳಿ ಖುಷಿಯಾಗುತ್ತೆ. ಆಗ ಅಮ್ಮ ಹೇಳ್ತಾಳೆ ‘ನೋಡು ಆ ಗೇಮ್ ನಲ್ಲಿ ಇನ್ನು ತುಂಬಾನೇ ಲೆವೆಲ್ ಇದೆ ನೀನು ಒಂದು ಲೆವೆಲ್ ಆಡಿ ಇಷ್ಟೊಂದು ಖುಷಿ ಪಡ್ತಿದ್ದೀಯಲ್ಲ ಅಂತ ಕೇಳ್ತಾರೆ.
ನಮ್ಮ ಜೀವನ ಕೂಡ ಹೀಗೆ ಅಲ್ವ ಈ ಗೇಮ್ ತರಾನೇ ಹಲವಾರು ಸಕ್ಸಸ್ ಆಗೋ ಲೆವೆಲ್ ಇದೆ. ಆದ್ರೆ ನಾವು ಬರಿ ಕೊನೆಯ ಲೆವೆಲ್ ಒಂದಕ್ಕೆ ಫೋಕಸ್ ಮಾಡ್ತೇವೆ. ಮತ್ತೆ ನಾವು ಪಾಸ್ ಮಾಡೋ ಪ್ರತಿಯೊಂದು ಲೆವೆಲ್ ಕೂಡ ಸಾಧಿಸೋ ಒಂದು ಮುಖ್ಯ ಅಂಶನೇ ಆಗಿರುತ್ತೆ. ನಿನ್ನೆಗಿಂತ ಇವತ್ತು ಏನೋ ಒಂದು ಸಾಧಿಸಿದ್ರೆ ಅದು ಕೂಡ ಒಂದು ಸಣ್ಣ ಸಕ್ಸಸ್ ಅದನ್ನ appreciate ಮಾಡೋದು ಕಲೀರಿ.

