ಬೀಚ್ ನಲ್ಲಿ ಆಟ ಆಡೋಕೆ ಬಂದ ಎಲ್ಲಾ ಮಕ್ಕಳಿಗೂ ಮರಳಲ್ಲಿ ಮನೆ ಕಟ್ಟೋ ಸ್ಪರ್ಧೆ ಕೊಟ್ರು.ಮೂರೂ ನಾಲ್ಕು ಮಕ್ಕಳು ಸ್ಪರ್ಧೆಗೆ ರೆಡಿ ಅಂತ ಹೆಸರು ಕೊಟ್ಟು ಮರಳಲ್ಲಿ ಮನೆ ಕಟ್ಟೋಕೆ ಶುರು ಮಾಡಿದ್ರು.
ಆಟದಲ್ಲಿ ಭಾಗವಹಿಸದೇ ಇರುವ ಮಕ್ಕಳು ಆಟ ಆಡೋಕೆ ಬಂದವರನ್ನ ತಮಾಷೆ ಮಾಡೋಕೆ ಶುರು ಮಾಡಿದ್ರು. ಮೊದಲನೇ ಸ್ಪರ್ಧಿಗೆ ‘ನೀನು ಇಷ್ಟು ನಿಧಾನವಾಗಿ ಮಾಡಿದ್ರೆ ಈ ಸ್ಪರ್ಧೆ ಗೆಲ್ಲಲ್ಲ ‘ ಅಂತ ತಮಾಷೆ ಮಾಡೋಕೆ ಶುರು ಮಾಡಿದ್ರು, ಮೊದಲನೇ ಸ್ಪರ್ಧಿಗೆ ತುಂಬಾ ಬೇಜಾರಾಗಿ ಅರ್ಧ ಮಾಡಿರೋ ಮರಳಿನ ಮನೆನಾ ಬೀಳಿಸಿ ಅಲ್ಲಿಂದ ಹೋಗ್ತಾಳೆ.
ಎರಡನೇ ಸ್ಪರ್ಧಿಗೂ ಕೂಡ ‘ನಿನ್ನ ಮನೆ ಅರಮನೆ ತರ ಇಲ್ಲ ಕೊಟ್ಟಿಗೆ ತರ ಇದೆ’ ಅಂತ ಎರಡನೇ ಸ್ಪರ್ಧಿ ಕೂಡ ಸಿಟ್ಟಲ್ಲಿ ಮಾಡಿರೋ ಮನೆಯನ್ನು ಬೀಳಿಸಿ ಕೋಪದಲ್ಲಿ ಹೋಗ್ತಾನೆ. ಮೂರನೇ ಸ್ಪರ್ಧಿಯ ಮನೆ ಕಟ್ಟಿ ಆಗುತ್ತೆ ಆದ್ರೆ ಅದು ತಕ್ಷಣ ಬಿದ್ದು ಹೋಗುತ್ತೆ ಅವಳು ಕೂಡ ಅಲ್ಲಿಂದ ಎದ್ದು ಹೋಗ್ತಾಳೆ.
ಕೊನೆಗೆ ಉಳಿದಿರೋ ಪುಟ್ಟ ಹುಡುಗ ಮರಳಿನಲ್ಲಿ ಕಟ್ಟಿರೋ ಮನೆ ಕೂಡ ಬೀಳುತ್ತೆ. ಎಲ್ಲರು ನೋಡಿ ನಗ್ತಾರೆ. ಆದ್ರೆ ಅವನು ಯಾವುದಕ್ಕೂ ಕಿವಿ ಕೊಡೋದಿಲ್ಲ. ಸಮಾಧಾನದಿಂದ ಮತ್ತೆ ಮಾಡ್ತಾನೆ. ಅವನ ಮರಳಿನ ಮನೆ ತುಂಬಾ ಸ್ಟ್ರಾಂಗ್ ಆಗಿ ನಿಲ್ಲುತ್ತೆ . ಆ ಸ್ಪರ್ಧೆ ಕೂಡ ಗೆಲ್ಲುತ್ತಾನೆ.
ನಾವು ಕೂಡ ಅಷ್ಟೇ ಯಾರು ಏನ್ ಹೇಳ್ತಾರೆ ಅಂತ ಜಾಸ್ತಿ ತಲೆ ಕೆಡಿಸ್ಕೊಬಾರ್ದು. ನಮ್ಮ ಮನಸ್ಸಿನ ಮಾತು ಕೇಳಿದ್ರೆ ಸಾಕು ಏನಂತೀರಾ?

