March 26, 2026
Thursday, March 26, 2026
spot_img

ನಟ ರಣವೀರ್ ಸಿಂಗ್ ಗೆ ತಾತ್ಕಾಲಿಕ ರಿಲೀಫ್: ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್ 1 ಚಲನಚಿತ್ರದದೈವವನ್ನು ದೆವ್ವ ಎಂದು ಅವಮಾನ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನಾಗಪ್ರಸನ್ನ‌ ಪೀಠ ಮತ್ತೊಮ್ಮೆ ನಟ ರಣವೀರ್ ಸಿಂಗ್ ರನ್ನು ತರಾಟಗೆ ತೆಗೆದುಕೊಂಡಿದೆ.

ಧಾರ್ಮಿಕ ಭಾವನೆಗೆ ಯಾರು ದಕ್ಕೆ ತರುವ ಹಾಗೆ ಮಾತಬಾಡಬಾರದು. ಅದು ರಣವೀರ್ ಸಿಂಗ್ ಅಗಿರಲಿ, ಯಾರೇ ಅಗಿದ್ದು ಸರಿ ಹಾಗೆ ಮಾತನಾಡುವುದು ಸಲ್ಲದು. ಓರ್ವ ಸೂಪರ್ ಸ್ಟಾರ್ ಅಗಿರುವ ರಣವೀರ್ ಸಿಂಗ್ ಗೆ ಸಾಕಷ್ಟು ಜನ ಫಾಲೊ ಮಾಡುವವರು ಇದ್ದಾರೆ. ಹೀಗಾಗಿ ಇದನ್ನ ಹಗುರವಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಇದೇ ವೇಳೆ ವಾದ ಕೋರ್ಟ್ ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸಿದಂತೆ ಆದೇಶ ಮಾಡಿ ಮುಂದಿನ‌ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !