ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಕರ್ನಾಲಿ ಪ್ರಾಂತ್ಯದಲ್ಲಿ 18 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜೀಪೊಂದು ಸುಮಾರು 700 ಅಡಿಗಳಷ್ಟು ಬೆಟ್ಟದ ಕೆಳಗೆ ಉರುಳಿಬಿದ್ದ ಪರಿಣಾಮ ಎಂಟು ಜನರು ಸಾವನ್ನಪ್ಪಿ, 10 ಜನರು ಗಾಯಗೊಂಡ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 500 ಕಿ.ಮೀ ದೂರದಲ್ಲಿರುವ ರುಕುಮ್ ಪಶ್ಚಿಮ ಜಿಲ್ಲೆಯ ಬಾಫಿಕೋಟ್‌ನ ಜರ್ಮಾರೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಮುಸಿಕೋಟ್‌ನ ಖಲಂಗಾದಿಂದ ಅಥ್ಬಿಸ್ಕೋಟ್ ಪುರಸಭೆಯ ಸಯಾಲಿಖಾಡಿ ಪ್ರದೇಶದ ಕಡೆಗೆ ವಾಹನ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಅಪಘಾತಕ್ಕೆ ಅತಿ ವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

