April 10, 2026
Friday, April 10, 2026
spot_img

ರಾಮ ಮಂದಿರದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಉಗ್ರನ ಹ*ತ್ಯೆ: ಜೈಲಿನಲ್ಲೇ ಕೈದಿಯಿಂದ ನಡೆಯಿತು ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಯುವಕ ಜೈಲಿನಲ್ಲೇ ಹತ್ಯೆಗೀಡಾದ ಘಟನೆ ನಡೆದಿದೆ.

ಫರಿದಾಬಾದ್ ಜೈಲಿನಲ್ಲಿ ನಡೆದ ಈ ಘಟನೆಯಲ್ಲಿ ಅಬ್ದುಲ್ ರೆಹಮಾನ್ (20) ಮೃತಪಟ್ಟಿದ್ದಾನೆ.

ಭಾನುವಾರ ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ಎಂಬ ಕೈದಿಯ ನಡುವೆ ಜಗಳ ಉಂಟಾಗಿದ್ದು, ಅದು ಹಿಂಸಾತ್ಮಕ ತಿರುವು ಪಡೆದುಕೊಂಡಿತು. ರಾತ್ರಿ ಸುಮಾರು 8 ಗಂಟೆ ವೇಳೆಗೆ ಅರುಣ್ ಚೌಧರಿ ತೀಕ್ಷ್ಣವಾದ ವಸ್ತುವಿನಿಂದ ರೆಹಮಾನ್‌ನ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೆಹಮಾನ್‌ನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವನು ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ:

ರೆಹಮಾನ್‌ ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, 2025ರ ಮಾರ್ಚ್‌ನಲ್ಲಿ ಗುಜರಾತ್ ಎಟಿಎಸ್ ಮತ್ತು ಹರಿಯಾಣ ಎಸ್‌ಟಿಎಫ್ ಸಂಯುಕ್ತ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಅವನ ಬಳಿ ಎರಡು ಹ್ಯಾಂಡ್ ಗ್ರೆನೇಡ್‌ಗಳು ಪತ್ತೆಯಾಗಿದ್ದವು. ಡಿಜಿಟಲ್ ಸಾಧನಗಳಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ಮಾಹಿತಿಗಳು ಮತ್ತು ದಾಳಿ ಯೋಜನೆಗಳ ಸುಳಿವು ಸಿಕ್ಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !