Sunday, January 11, 2026

ನಟನಾಗಿ ದಳಪತಿ ವಿಜಯ್‌ ಕೊನೆ ಭೇಟಿ: ‘ಜನ ನಾಯಗನ್’ ಆಡಿಯೋ ಲಾಂಚ್, ಟಿಕೆಟ್ ರೇಟ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ನಟನಾಗಿ ಅಭಿಮಾನಿಗಳನ್ನು ಭೇಟಿ ಮಾಡುವ ಕೊನೆಯ ಕ್ಷಣಕ್ಕೆ ವೇದಿಕೆ ಸಿದ್ಧವಾಗಿದೆ. ತಮ್ಮ ಮುಂಬರುವ ಹಾಗೂ ಅಂತಿಮ ಚಿತ್ರ ಜನ ನಾಯಗನ್ ಬಿಡುಗಡೆಗೂ ಮುನ್ನ ನಡೆಯುವ ಭವ್ಯ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮಲೇಷ್ಯಾದ ಬುಕಿಟ್ ಜಲೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸುಮಾರು 90 ಸಾವಿರಕ್ಕೂ ಸಮೀಪದ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ‘ದಳಪತಿ ತಿರುವಿಳ’ ಎಂಬ ಹೆಸರಿನ ಈ ಕಾರ್ಯಕ್ರಮವನ್ನು ವಿಜಯ್ ಅವರ ಸಿನಿಜೀವನಕ್ಕೆ ಗೌರವ ಸಲ್ಲಿಸುವ ಐತಿಹಾಸಿಕ ಸಮಾರಂಭವಾಗಿ ರೂಪಿಸಲಾಗಿದೆ.

ವರ್ಷಗಳಿಂದ ಆಡಿಯೋ ಬಿಡುಗಡೆ ವೇದಿಕೆಗಳಲ್ಲಿ ವಿಜಯ್ ನೀಡುತ್ತಿದ್ದ ಪ್ರಭಾವಶಾಲಿ ಭಾಷಣಗಳು ಅಭಿಮಾನಿಗಳಲ್ಲಿ ಅಪಾರ ಉತ್ಸಾಹ ಹುಟ್ಟುಹಾಕುತ್ತಿದ್ದವು. ಈ ಬಾರಿ ಅದು ನಟನಾಗಿ ಅವರ ಕೊನೆಯ ಮಾತಾಗುವ ಕಾರಣ ವಿಶೇಷ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ಜನ ನಾಯಗನ್ ಚಿತ್ರ ಬಿಡುಗಡೆಯ ನಂತರ ವಿಜಯ್ ಸಂಪೂರ್ಣವಾಗಿ ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ನವೆಂಬರ್ ಅಂತ್ಯದೊಳಗೆ ಟಿಕೆಟ್‌ಗಳು ಆನ್‌ಲೈನ್ ಮೂಲಕ ಲಭ್ಯವಾಗಲಿದ್ದು, ವಿವಿಧ ಬೆಲೆ ವರ್ಗಗಳಲ್ಲಿ ವಿತರಿಸಲಾಗುತ್ತಿದ್ದು, RM 99 (ರೂ 2,144), RM 199 (ರೂ 4,309), ಮತ್ತು RM 299 (ರೂ 6,475). ವಿದೇಶದಿಂದ ಬರುವ ಅಭಿಮಾನಿಗಳಿಗಾಗಿ ಪ್ರವಾಸ ಹಾಗೂ ವಸತಿ ಒಳಗೊಂಡ ವಿಶೇಷ ಪ್ಯಾಕೇಜ್‌ಗಳನ್ನೂ ಘೋಷಿಸಲಾಗಿದೆ. ಟಿಕೆಟ್ ಪ್ಲಾಟ್‌ಫಾರ್ಮ್ ಅನ್ನು ಅವರ ವೆಬ್‌ಸೈಟ್‌ನಲ್ಲಿ ಲೈವ್ ಚಾಟ್ ಮೂಲಕ ಪಡೆದುಕೊಳ್ಳಬಹುದಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!