ಹೊಸದಿಗಂತ ವರದಿ ಬೀದರ್:
ಅತೀವ ನೋವು ಮತ್ತು ಕೃತಜ್ಞತೆಯ ಭಾವಗಳೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ತಂದೆಯವರಾದ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರಗಳನ್ನು ಸರ್ಕಾರದ ಸಂಪೂರ್ಣ ಗೌರವಗಳೊಂದಿಗೆ ನೆರವೇರಿಸಲಾಯಿತು.
ಅವರ ಜನಪರ ಬದುಕು, ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳಿಗೆ ದೊರೆತ ಈ ಗೌರವವು ನಮ್ಮ ಕುಟುಂಬಕ್ಕೆ ಅಪಾರ ಸಂತೋಷದ ಜೊತೆಗೆ ಆಳವಾದ ಭಾವುಕತೆಯನ್ನು ತಂದಿದೆ.
ಈ ದುಃಖದ ಘಳಿಗೆಯಲ್ಲಿ ನಮ್ಮ ಕುಟುಂಬದೊಂದಿಗೆ ನಿಂತು, ಅಂತಿಮ ಯಾತ್ರೆ, ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ನಿಜಗುಣಾನಂದ ಮಹಾಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು, ಸೇರಿದಂತೆ ಜಿಲ್ಲೆಯ ಹಾಗೂ ನಾಡಿನ ಸಮಸ್ತ ಮಠಾಧೀಶರಿಗೆ ನನ್ನ ಹಾಗೂ ನಮ್ಮ ಕುಟುಂಬದ ಹೃದಯಪೂರ್ವಕ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,ಎಚ್ ಕೆ.ಪಾಟಿಲ,
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕ ಮಿತ್ರರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯಾತಿ ಗಣ್ಯರು ನೀಡಿದ ಗೌರವ ಮತ್ತು ಸಾನಿಧ್ಯಕ್ಕೆ ನನ್ನ ಹಾಗೂ ನಮ್ಮ ಕುಟುಂಬದ ಆಭಾರವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ಇದಲ್ಲದೆ, ಅಧಿಕಾರಿಗಳು, ಪೊಲೀಸ್ ಇಲಾಖೆ, ಪಕ್ಷದ ಸಹೋದ್ಯೋಗಿಗಳು, ಮಿತ್ರರು, ಹಿತೈಷಿಗಳು ಹಾಗೂ ಅಪಾರ ಸಾವಿರಾರು ಸಾರ್ವಜನಿಕರು ನೀಡಿದ ಪ್ರೀತಿ, ಪ್ರಾರ್ಥನೆ ಮತ್ತು ಸಹಾನುಭೂತಿ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನಮಗೆ ನೀಡಿದೆ.
ತಂದೆಯವರ ಸ್ಮರಣೆ, ಅವರ ಮೌಲ್ಯಗಳು ಮತ್ತು ಅವರು ಹಾಕಿಕೊಟ್ಟ ಬದುಕಿನ ದಾರಿ ಸದಾ ನಮ್ಮೆಲ್ಲರ ಮನಸ್ಸಿನಲ್ಲಿ ಜೀವಂತವಾಗಿರಲಿದೆ ಎಂದರು.


