Monday, December 22, 2025

ಕಿಚ್ಚನ ಬಾಯಿಂದ ಆ ಒಂದು ಪದ ಬರಬಾರದಿತ್ತು! ಸುದೀಪ್ ಮಾತಿಗೆ ನೆಟ್ಟಿಗರ ಅಸಮಾಧಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲಿದ್ದು, ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆಯುತ್ತಿವೆ. ಈ ನಡುವೆಯೇ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ವೇದಿಕೆಯಲ್ಲಿ ಮಾತನಾಡುವ ವೇಳೆ ಅವರು ಬಳಸಿದ ಕೆಲವು ಪದಗಳು ಅಭಿಮಾನಿಗಳ ಮಧ್ಯೆ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, “ನಾವು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ” ಎಂದು ಹೇಳಿ, ತಮ್ಮ ಅಭಿಮಾನಿಗಳನ್ನು ಡಿಸೆಂಬರ್ 25ರಂದು ಚಿತ್ರಕ್ಕೆ ಭರ್ಜರಿ ಬೆಂಬಲ ನೀಡುವಂತೆ ಕರೆ ನೀಡಿದ್ದರು. ಈ ಮಾತುಗಳನ್ನು ಕೆಲವರು ಚಿತ್ರಪ್ರಚಾರದ ಉತ್ಸಾಹದ ಭಾಗವೆಂದು ನೋಡಿದರೆ, ಇನ್ನೂ ಕೆಲವರು ‘ಯುದ್ಧ’ ಎಂಬ ಪದ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಇಂತಹ ಹೇಳಿಕೆ ಅನಗತ್ಯ ವಿವಾದಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಸಿನಿಮಾ ನಟರು, ಸಿನಿಮಾ ಮಾಡಬೇಕು ಅದು ಬಿಟ್ಟು ಇವ್ರೇನ್ ಗಡಿ ಕಾಯೋ ಸೈನಿಕರ ಅಂತ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ, ‘ಮಾರ್ಕ್’ ಬಿಡುಗಡೆಗೂ ಮುನ್ನ ಕಿಚ್ಚನ ಹೇಳಿಕೆಗಳು ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

error: Content is protected !!