April 4, 2026
Saturday, April 4, 2026
spot_img

ಮಾ.19ಕ್ಕೆ ರಣಾಂಗಣ ಸಿದ್ಧ: ಯಶ್-ರಣವೀರ್ ನಡುವೆ ಬಿಗ್ ಫೈಟ್, ಯಾರಿಗೆ ಒಲಿಯಲಿದೆ ಜಯದ ಮಾಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ ತಿಂಗಳು ಚಿತ್ರಪ್ರೇಮಿಗಳಿಗೆ ನಿಜಕ್ಕೂ ಹಬ್ಬದ ಸಂಭ್ರಮ ತರಲಿದೆ. ಚಿತ್ರರಂಗದ ಇಬ್ಬರು ದೈತ್ಯ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ನಡುವೆ ಅತಿದೊಡ್ಡ ಬಾಕ್ಸ್ ಆಫೀಸ್ ಫೈಟ್ ಶುರುವಾಗಲಿದೆ. ಮಾರ್ಚ್ 19ರಂದು ಈ ಇಬ್ಬರು ಘಟಾನುಘಟಿಗಳ ಚಿತ್ರಗಳು ಏಕಕಾಲಕ್ಕೆ ತೆರೆಕಾಣುತ್ತಿದ್ದು, ಚರ್ಚೆ ಜೋರಾಗಿದೆ.

ಈ ಎರಡು ಚಿತ್ರಗಳ ಹಣಾಹಣಿಯಲ್ಲಿ ಬಜೆಟ್ ವಿಷಯವೇ ಪ್ರಮುಖ ಚರ್ಚೆಯ ವಸ್ತು. ವರದಿಗಳ ಪ್ರಕಾರ, ಬಜೆಟ್ ವಿಚಾರದಲ್ಲಿ ‘ಟಾಕ್ಸಿಕ್’ ಚಿತ್ರವೇ ಮುಂಚೂಣಿಯಲ್ಲಿದೆ.

ಗೀತು ಮೋಹನ್ ದಾಸ್ ಸಾರಥ್ಯದ ‘ಟಾಕ್ಸಿಕ್’ ಚಿತ್ರದಲ್ಲಿ ಕೇವಲ ಯಶ್ ಮಾತ್ರವಲ್ಲದೆ, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿಯಂತಹ ದೊಡ್ಡ ತಾರಾಬಳಗವೇ ಇದೆ. ಈ ಅದ್ದೂರಿ ತಾರಾಗಣವೇ ಚಿತ್ರದ ಬಜೆಟ್ ಅನ್ನು 500 ಕೋಟಿಯ ಗಡಿ ದಾಟಿಸಿದೆ ಎನ್ನಲಾಗಿದೆ.

ಇತ್ತ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಮೊದಲ ಭಾಗದೊಂದಿಗೆ ಚಿತ್ರೀಕರಣಗೊಂಡಿರುವುದರಿಂದ, ಇದರ ಬಜೆಟ್ ಕೊಂಚ ಮಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೂ ಬಾಲಿವುಡ್ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ ದೊಡ್ಡ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !