Monday, November 10, 2025

ಅನ್ನದಾತನಿಗೆ ಸಿಕ್ತು ನ್ಯಾಯ! ಕಾರ್ಖಾನೆ-ಸರ್ಕಾರದಿಂದ 50+50 ಸೂತ್ರ: 3,300ಕ್ಕೆ ಅಧಿಕೃತ ಮುದ್ರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಬ್ಬು ಬೆಳೆಗಾರರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 3,300 ದರ ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತ ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ರೈತರಿಗೆ ಹೆಚ್ಚುವರಿಯಾಗಿ 100 ನೀಡುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲಾಗಿತ್ತು.

ಈ ಹೆಚ್ಚುವರಿ ಮೊತ್ತವನ್ನು 50:50 ಸೂತ್ರದಡಿ ವಿತರಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಟನ್‌ಗೆ 50 ಅನ್ನು ಕಾರ್ಖಾನೆಗಳ ಮಾಲೀಕರು ಮತ್ತು ಉಳಿದ 50 ಅನ್ನು ರಾಜ್ಯ ಸರ್ಕಾರವು ಭರಿಸಲಿದೆ. ಈ ಒಪ್ಪಂದಕ್ಕೆ ಈಗ ಸರ್ಕಾರವು ಅಧಿಕೃತ ಆದೇಶದ ಮುದ್ರೆ ಒತ್ತಿದೆ.

error: Content is protected !!