ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಅಪಘಾತ ಸಂತ್ರಸ್ತರ ಕಣ್ಣೀರನ್ನು ಒರೆಸಿದೆ.
ರಸ್ತೆ ಅಪಘಾತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರು, ಅವರ ಕುಟುಂಬಗಳಿಗೆ ನೆರವಾಗುವ ಹಾಗೂ ಜೊತೆಯಾಗಿ ನಿಲ್ಲುವ ಈ ಬಾರಿಯ ಬಜೆಟ್‌ನಲ್ಲಿ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿನ ಸಂತ್ರಸ್ತರು, ಮಡಿದ ಕುಟುಂಬಕ್ಕೆ ನೀಡುವ ಪರಿಹಾರದ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಈ ಮಹತ್ವದ ನಿರ್ಧಾರವನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬ, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತದೆ. ಈ ಪರಿಹಾರ ಸಂತ್ರಸ್ರರ ಕೈಸೇರುವಾಗ ತೆರಿಗೆ ಕಡಿತಗೊಳ್ಳಲಿದೆ. ಸದ್ಯ 50,000 ರೂಪಾಯಿ ವರೆಗಿನ ಪರಿಹಾರ ಮೊತ್ತಕ್ಕೆ ಶೇಕಡಾ 10ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇನ್ಮುಂದೆ ಈ ತೆರಿಗೆ ಇರುವುದಿಲ್ಲ. ಸರ್ಕಾರ ಘೋಷಿಸಿದ ಸಂಪೂರ್ಣ ಮೊತ್ತ ಸಂತ್ರಸ್ತರ ಕೈಸೇರಲಿದೆ.
ಉದಾಹರಣೆಗೆ 2 ಲಕ್ಷ ರೂಪಾಯಿ ಸರ್ಕಾರ ಹರಿಹಾರ ನೀಡಿದರೆ ಅದರಲ್ಲಿ 20,000 ರೂಪಾಯಿ ತೆರಿಗೆ ರೂಪದಲ್ಲಿ ಕಡಿತಗೊಳ್ಳಲಿದೆ. ಇದರಿಂದ ಗಾಯಗೊಂಡವರ ಚಿಕಿತ್ಸೆಗಾಗಿ ಮತ್ತೆ ಪರದಾಡುವಂತಾಗುತ್ತದೆ. ಹೀಗಾಗಿ ಈ ತೆರಿಗೆ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ ಸಂಪೂರ್ಣ ಹಣ ಕೈ ಸೇರಲಿದೆ.



