Saturday, September 6, 2025

ಭಾರತ- ಪಾಕಿಸ್ತಾನ ಮ್ಯಾಚ್ ಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿಲ್ಲ: BCCI

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಪಾಕಿಸ್ತಾನದ ನಡುವಿನ ಪಂದ್ಯಗಳು ಆಗುತ್ತಾ ಇಲ್ಲವೇ ಗೊಂದಲಗಳ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದೊಂದಿಗೆ ಸ್ನೇಹಪರವಲ್ಲದ ಯಾವುದೇ ರಾಷ್ಟ್ರದ ವಿರುದ್ಧ ಆಡದಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ತಿಳಿಸಿದ್ದಾರೆ.

ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ‌ – ಪಾಕ್ ಪಂದ್ಯದ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬಿಸಿಸಿಐ ಬದ್ಧವಾಗಿದೆ, ಅದನ್ನು ನಾವು ಅನುಸರಿಸುತ್ತೇವೆ. ಆದ್ರೆ ಹೊಸ ಮಾರ್ಗಸೂಚಿಯ ಪ್ರಕಾರ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಸ್ನೇಹಪರವಲ್ಲದ ರಾಷ್ಟ್ರಗಳೊಂದಿಗೆ ಆಡದಂತೆ ಕೇಂದ್ರ ನಿರ್ಬಂಧ ವಿಧಿಸಿಲ್ಲ. ಆದ್ರೆ ದ್ವಿಪಕ್ಷೀಯ ಸರಣಿಗಳನ್ನು ಆಡುವಂತಿಲ್ಲ ಎಂದು ಹೇಳಿದ್ದಾರೆ.

ಏಷ್ಯಾ ಕಪ್‌ ಏಷ್ಯಾ ಖಂಡದ ದೇಶಗಳನ್ನು ಒಳಗೊಂಡ ಬಹುರಾಷ್ಟ್ರೀಯ ಪಂದ್ಯಾವಳಿ ಆಗಿರೋದ್ರಿಂದ ನಾವು ಭಾಗವಹಿಸಬೇಕಾಗುತ್ತೆ. ಅದೇ ರೀತಿ ಐಸಿಸಿ ಟೂರ್ನಿಗಳು ಬಂದಾಗ ಭಾರತದೊಂದಿಗೆ ಸ್ನೇಹಪರವಲ್ಲದ ರಾಷ್ಟ್ರಗಳು ಪಾಲ್ಗೊಂಡರೂ ನಾವು ಆಡಬೇಕಾಗುತ್ತದೆ. ಆದ್ರೆ ದ್ವಿಪಕ್ಷೀಯ ಸರಣಿಗಳನ್ನು ಮಾತ್ರ ಸ್ನೇಹಪರವಲ್ಲದ ರಾಷ್ಟ್ರಗಳೊಂದಿಗೆ ಆಡಲಾಗದು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ