Tuesday, December 2, 2025

ಕರಾವಳಿ ಐಕ್ಯತಾ ವೇದಿಕೆಗೆ ಮೂರರ ಸಂಭ್ರಮ: ನೂತನ ಸಾರಥಿಗಳ ಸಾರಥ್ಯ

ಹೊಸದಿಗಂತ ವರದಿ ಬೆಂಗಳೂರು :

ʼಕರಾವಳಿ ಐಕ್ಯತಾ ವೇದಿಕೆ ಯಶವಂತಪುರ ಬೆಂಗಳೂರುʼ ಇದರ ಮೂರನೇ ವಾರ್ಷಿಕ ಮಹಾಸಭೆಯ ಯಶವಂತಪುರದಲ್ಲಿರುವ ಹೀರಾ ನ್ಯೂ ಲಾಡ್ಜ್ ಸಭಾಂಗಣದಲ್ಲಿ ನಾಸಿರ್ ಹೀರಾ ಅಧ್ಯಕ್ಷತೆಯಲ್ಲಿ ನಡೆದಿದೆ.

ಪ್ರಧಾನ ಕಾರ್ಯದರ್ಶಿ ಫಯಾಝ್ ಹಾಂದಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಅಯ್ಯೂಬ್ ನೀಲಗಿರಿ ವಾರ್ಷಿಕ ಆಯ-ವ್ಯಯ ಲೆಕ್ಕಪತ್ರವನ್ನು ಮಂಡನೆ ಮಾಡಿ ಎಲ್ಲರ ಅನುಮೋದನೆಯನ್ನು ಪಡೆದರು.

ತದನಂತರ ಸಂಸ್ಥೆಯ ಕಾನೂನು ಸಲಹೆಗಾರರಾದ ಅಶ್ರಫ್ ಪಿ ಎಂ ಮಾತನಾಡಿ, ಈ ಕರಾವಳಿ ಐಕ್ಯತೆ ವೇದಿಕೆಯ ಎಂಬ ಸಂಘಟನೆಯು ಕಳೆದ ಮೂರು ವರ್ಷಗಳಿಂದ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಒಗ್ಗಟ್ಟು ಮತ್ತು ಸೌಹಾರ್ದದಿಂದ ಕೂಡಿ ಬಾಳಬೇಕು ಎಂದರು.

ನೂತನ ಕಮಿಟಿಯ ಅಧ್ಯಕ್ಷರನ್ನಾಗಿ ಮಹಮದ್ ಅಲಿ ಶಾ ಈ ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಅಶ್ರಫ್ ಕೊಕ್ಕಡ ಹಾಗೂ ರಫೀಕ್ ಕಡಬರನ್ನು ಕೋಶಾಧಿಕಾರಿಯನ್ನಾಗಿ ಮತ್ತು ಮೀಡಿಯಾದ ಜವಬ್ದಾರಿಯನ್ನು ಮುಹಮ್ಮದ್ ಅಲೀಗೆ ನೀಡಲಾಯಿತು.

ಹಿರಿಯ ಸದಸ್ಯರುಗಳಾದ ಹನೀಫ್ ಬಾಯ್, ಹಂಝ ಹಾಜಿ, ರಫೀಖ್ ರಾಫಿ, ಅಬ್ದುಲ್ಲತೀಫ್ ಮತ್ತು ಮುಸ್ತಫ ಪೆರ್ನೆ ಇವರೆಲ್ಲರನ್ನೂ ಕಮಿಟಿಯ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು. ಇನ್ನಿತರ 26 ಸದಸ್ಯರಗಳನ್ನು ಕಮಿಟಿಯ ಕಾರ್ಯಕಾರಿ ಸದಸ್ಯರನ್ನಾಗಿ ಮಂದಿಯನ್ನು ಆರಿಸಿ ಅದರಲ್ಲೂ ಉಪಾಧ್ಯಕ್ಷ, ಜತೆ ಕಾರ್ಯದರ್ಶಿ ಮತ್ತು ವೈದ್ಯಕೀಯ, ಕ್ರೀಡಾ ಮತ್ತು ಮೀಡಿಯಾ ವಿಂಗ್ಎಂಬ ಬೇರೆ ಬೇರೆ ಹುದ್ದೆಯಗಳನ್ನು ನಿರ್ವಹಿಸಲು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ನಿರೂಪಣೆ ಶಾಹೀಕ್ ಮಾಲಾರ್ ವಹಿಸಿಕೊಂಡರು ಕೊನೆಯದಾಗಿ ನೂತನ ಕಾರ್ಯದರ್ಶಿ ಎಲ್ಲರನ್ನು ವಂದಿಸಿದರು.

error: Content is protected !!