April 8, 2026
Wednesday, April 8, 2026
spot_img

‘ಡಾನ್ಸ್ ಕರ್ನಾಟಕ ಡಾನ್ಸ್’ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರು: ಯಾರ ಮುಡಿಗೇರಲಿದೆ ಈ ಬಾರಿಯ ಕಿರೀಟ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಕಳೆದ ಹಲವು ವಾರಗಳಿಂದ ವೀಕ್ಷಕರಿಗೆ ರಂಜನೆಯ ರಸದೌತಣ ನೀಡುತ್ತಾ ಬಂದಿರುವ ಈ ಕಾರ್ಯಕ್ರಮದ ‘ಮಹಾ ಫಿನಾಲೆ’ ಇದೇ ಏಪ್ರಿಲ್ 11 ಮತ್ತು 12 ರಂದು ಅದ್ಧೂರಿಯಾಗಿ ಪ್ರಸಾರವಾಗಲಿದೆ.

ಫಿನಾಲೆ ಸಮಯ:

ಏಪ್ರಿಲ್ 11 (ಶನಿವಾರ): ಸಂಜೆ 7:00 ರಿಂದ 9:00 ವರೆಗೆ.

ಏಪ್ರಿಲ್ 12 (ಭಾನುವಾರ): ಸಂಜೆ 7:00 ರಿಂದ ರಾತ್ರಿ 9:30 ರವರೆಗೆ.

ಈ ಸೀಸನ್‌ನಲ್ಲಿ ಕೇವಲ ನೃತ್ಯಕ್ಕೆ ಮಾತ್ರವಲ್ಲದೆ, ಸೆಲೆಬ್ರಿಟಿಗಳು ಮತ್ತು ನೃತ್ಯಗಾರರ ಜೋಡಿಗಳು ಜಾನಪದ, ಶಾಸ್ತ್ರೀಯ ಹಾಗೂ ಸಿನಿಮಾ ಶೈಲಿಯ ನೃತ್ಯಗಳನ್ನು ವಿಭಿನ್ನ ಥೀಮ್‌ಗಳ ಅಡಿಯಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ತೀರ್ಪುಗಾರರಾದ ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವರು ಸ್ಪರ್ಧಿಗಳ ಭಾವನೆ, ಸಮನ್ವಯತೆ ಮತ್ತು ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಿ ನೀಡಿದ ಸಲಹೆಗಳು ಸ್ಪರ್ಧಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರ ಲವಲವಿಕೆಯ ಮಾತುಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿವೆ.

ಅಂತಿಮ ಪೈಪೋಟಿಯಲ್ಲಿರುವ ಐದು ಜೋಡಿಗಳು:

ಪೂಜಾ ಮತ್ತು ಅನೂಪ್

ಸಿದ್ದೇಗೌಡ್ರು ಮತ್ತು ದೀಶಲ್

ಮೋಹಿತ್ ಮತ್ತು ಅನನ್ಯ

ಹರ್ಷ ಮತ್ತು ನಂದು

ಶಿಕ್ಷಿತ್ ತಾಪಾ ಮತ್ತು ಸಂಜನಾ

ಈ ಐದು ಜೋಡಿಗಳ ನಡುವೆ ಈಗ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರತಿಯೊಂದು ಜೋಡಿಯೂ ತನ್ನದೇ ಆದ ವಿಶಿಷ್ಟ ಶೈಲಿಯಿಂದ ವೀಕ್ಷಕರ ಮನಗೆದ್ದಿದ್ದು, ಈ ಬಾರಿ ‘ವಿನ್ನರ್’ ಪಟ್ಟ ಯಾರ ಪಾಲಾಗಲಿದೆ ಎಂಬ ಕುತೂಹಲ ರಾಜ್ಯಾದ್ಯಂತ ಮನೆಮಾಡಿದೆ.

ನೃತ್ಯದ ಈ ಅದ್ಭುತ ಲೋಕವನ್ನು ಕಣ್ತುಂಬಿಕೊಳ್ಳಲು ಮತ್ತು ವಿನ್ನರ್ ಯಾರಾಗಲಿದ್ದಾರೆ ಎಂದು ತಿಳಿಯಲು ಈ ವಾರಾಂತ್ಯ ತಪ್ಪದೇ ಜೀ ಕನ್ನಡ ವೀಕ್ಷಿಸಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !