Wednesday, December 24, 2025

ಚಾಲಕನ ಕಂಟ್ರೋಲ್‌ ತಪ್ಪಿ ಕೆರೆಗೆ ಬಿದ್ದ ಕಾರ್‌: ಇಬ್ಬರು ಜಲಸಮಾಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ ಹೊಸೂರು ಬಳಿ ಇಂದು ಮುಂಜಾನೆ ನಡೆದಿದೆ.‌ ಕಾರು ಕೆರೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ಗ್ರಾಮ ನಿವಾಸಿ ನವೀನ್(21) ಹಾಗೂ ರಾಮಚಂದ್ರ(37) ಮೃತರು. ರುದ್ರೇಶ್(26) ಹಾಗೂ ಮಂಜುನಾಥ್(21) ಇಬ್ಬರು ಪ್ರಾಣಾಪಾಯದಿಂದ ಪರಾಗಿದ್ದಾರೆ. ರಾಮಚಂದ್ರ ಕಾರನ್ನು ಚಲಾಯಿಸುತ್ತಿದ್ದರು.

ಇಂದು ಬೆಳಗಿನಜಾವ ಕಾರು ಶಿಕಾರಿಪುರದ ಪುನೇದಹಳ್ಳಿಯಿಂದ ಆನವಟ್ಟಿ ಕಡೆ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು‌. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!