ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಪ್ಲಾಯಿಗಳಿಗೆ ದೀಪಾವಳಿ, ದಸರಾ ಬಂದರೆ ಏನೋ ಖುಷಿ. ತಮಗಾಗಿ ಆಫೀಸ್‌ನಲ್ಲಿ ಉಡುಗೊರೆ, ಬೋನಸ್ ಸಿಗುತ್ತದೆ ಎಂದು ಲೆಕ್ಕ ಹಾಕಿರುತ್ತಾರೆ. ಆದರೆ ಅಂದುಕೊಂಡಷ್ಟು ಸಿಗದೇ ಹೋದಾಗ ನಾನ್ಯಾಕೆ ಇಲ್ಲಿ ಕೆಲಸ ಮಾಡ್ಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ.
ಇಲ್ಲೊಂದು ಕಾರ್ಖಾನೆಯಲ್ಲಿ ಬಾಸ್ ಸೋನ್‌ಪಾಪ್ಡಿ ಸ್ವೀಟ್‌ನ್ನು ಗಿಫ್ಟ್ ಆಗಿ ನೀಡಿದ್ದು, ಸಿಟ್ಟಿಗೆದ್ದ ಎಂಪ್ಲಾಯಿಗಳು ಅದನ್ನು ಕಾರ್ಖಾನೆಯ ಗೇಟ್ ಬಳಿಯೇ ಎಸೆದು ಹೋಗಿದ್ದಾರೆ.
ಹರ್ಯಾಣದ ಸೋನಿಪತ್ ನ ಗನ್ನೌರ್ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಯೊಂದರ ಮಾಲೀಕ ನೀಡಿದ್ದ ದೀಪಾವಳಿ ಉಡುಗೊರೆಗೆ ಅವರದ್ದೇ ಸಿಬ್ಬಂದಿ ಕೆಂಡಾಮಂಡಲರಾಗಿದ್ದಾರೆ. ಮಾತ್ರವಲ್ಲದೇ ಸಂಸ್ಥೆಯ ಗೇಟ್ ಮುಂದೆ ಎಸೆದು ಹೋಗಿರುವ ವಿಡಿಯೋ ವೈರಲ್ ಆಗಿದೆ.
VIRAL | ಬಾಸ್ ಕೊಟ್ಟ ಗಿಫ್ಟ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ! ಗೇಟ್ ಬಳಿ ಎಸೆದು ಹೋದ ಎಂಪ್ಲಾಯೀಸ್

