April 12, 2026
Sunday, April 12, 2026
spot_img

ಪಾಕ್ ಜನರಿಗೆ ಬರೆ ಮೇಲೆ ಬರೆ ಹಾಕ್ತಿರೋ ಸರ್ಕಾರ: ಮತ್ತೆ ವಿದ್ಯುತ್ ದರ ಹೆಚ್ಚಾಯಿತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಧನ ಬೆಲೆ ಏರಿಕೆಯ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಾಮಾನ್ಯ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಬಿದ್ದಿದೆ. ರಾಷ್ಟ್ರೀಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರವಾದ NEPRA ಪ್ರತಿ ಯೂನಿಟ್‌ಗೆ 1.42ರಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದು, ಈ ಹೆಚ್ಚುವರಿ ಮೊತ್ತ ಏಪ್ರಿಲ್ ತಿಂಗಳ ಬಿಲ್ಲಿನಲ್ಲಿ ಗ್ರಾಹಕರಿಗೆ ಅನ್ವಯವಾಗಲಿದೆ.

ಈ ಹೆಚ್ಚಳವು ಫೆಬ್ರವರಿ 2026ರ ಮಾಸಿಕ ಇಂಧನ ವೆಚ್ಚ ಹೊಂದಾಣಿಕೆ (Fuel Cost Adjustment) ಆಧಾರದ ಮೇಲೆ ಜಾರಿಯಾಗಿದೆ. ಈ ನಿರ್ಧಾರವು ದೇಶದ ಬಹುತೇಕ ಎಲ್ಲಾ ಗ್ರಾಹಕ ವರ್ಗಗಳಿಗೆ ಅನ್ವಯವಾಗಲಿದೆ. ಆದರೆ ಲೈಫ್‌ಲೈನ್ ಗ್ರಾಹಕರು, ಪ್ರೀಪೇಯ್ಡ್ ಬಳಕೆದಾರರು ಹಾಗೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿಗೆ ಈ ಹೆಚ್ಚಳದಿಂದ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ:

ಜಾಗತಿಕ ಇಂಧನ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಪಾಕಿಸ್ತಾನದ ಒಳನಾಡು ವಿದ್ಯುತ್ ವಿತರಣಾ ಸಮಸ್ಯೆಗಳು ಈ ನಿರ್ಧಾರಕ್ಕೆ ಪ್ರಮುಖ ಕಾರಣಗಳಾಗಿ ಕಾಣಿಸುತ್ತಿವೆ. ಕೈಗಾರಿಕಾ ವಲಯದ ಮೇಲೆ ಇದರ ಪರಿಣಾಮ ಗಂಭೀರವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದ ಸಂಕಷ್ಟದಲ್ಲಿರುವ ಉದ್ಯಮಗಳಿಗೆ ಇದು ಮತ್ತಷ್ಟು ಹೊರೆ ತರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !