Saturday, September 20, 2025

ಇನ್ನೆರಡು ದಿನದಲ್ಲಿ ಈ ವರ್ಷದ ಕೊನೆಯ ಸೂರ್ಯಗ್ರಹಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆ. 21 ರಂದು ಮಹಾಲಯ ಅಮವಾಸೆ ದಿನದಂದು ಸಂಭವಿಸಲಿದೆ.

ಆ ಮೂಲಕ ಖಗೋಳದಲ್ಲಿ ನಡೆಯಲಿರುವ ಮತ್ತೊಂದು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಇಡೀ ವಿಜ್ಞಾನ ಲೋಕವೆ ಸಜ್ಜಾಗಿದೆ. ಕೇವಲ ಹದಿನೈದು ದಿನಗಳ ಅಂತರದಲ್ಲಿ ಸೂರ್ಯ-ಚಂದ್ರ ಗ್ರಹಣಕ್ಕೆ ಖಗೋಳ ಸಾಕ್ಷಿಯಾಗುತ್ತಿದ್ದು, ವಿಜ್ಞಾನದ ಆಸಕ್ತರಿಗೆ ಇದು ಸಾಕಷ್ಟು ಮಹತ್ವಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದ ಹಿಂದೆಯಷ್ಟೇ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಿತ್ತು. ಇದಾದ ಹದಿನೈದು ದಿನಗಳ ಅಂತರದಲ್ಲಿ ಇದೀಗ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು 2025 ರ ಅಂತಿಮ ಸೂರ್ಯ ಗ್ರಹಣವೂ ಹೌದು.

ಸೂರ್ಯನನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಒಟ್ಟು ಗ್ರಹಣಕ್ಕಿಂತ ಭಿನ್ನವಾಗಿದೆ ಅಂತಿದ್ದಾರೆ ವಿಜ್ಞಾನಿಗಳು. ಇದು ಭಾಗಶಃ ಸೂರ್ಯ ಗ್ರಹಣವಾಗಿದ್ದು, ವಿಜ್ಞಾನಿಗಳಿಗೆ ಹಾಗೂ ಆಸಕ್ತರಿಗೆ ವಿಶೇಷವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಈ ಅಪರೂಪದ ಸೂರ್ಯ ಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲೆ ತನ್ನ ನೆರಳನ್ನು ಬೀಳಿಸಿ ಸೂರ್ಯನ ಬೆಳಕನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಈ ಅಪರೂಪದ ಘಟನೆಯನ್ನು ಚಂದ್ರನ ನೆರಳು ಮಾರ್ಗದಲ್ಲಿ ನಿರ್ದಿಷ್ಟ ಪ್ರದೇಶಗಳಿಂದ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ ಕಾಣಬಹುದಾಗಿದೆ.

ಇದನ್ನೂ ಓದಿ