April 12, 2026
Sunday, April 12, 2026
spot_img

WEATHER | ಹವಾಮಾನ ಇಲಾಖೆ ಎಚ್ಚರಿಕೆ ಕೊಡ್ತಾನೇ ಇದೆ, ನಿಮ್ಮ ಆರೋಗ್ಯ ನೀವೇ ನೋಡ್ಕೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಬಿಸಿಲು ಅತಿಯಾಗುತ್ತಲೇ ಇದೆ. ಇದರಿಂದಾಗ ಜನರ ಜೀವನ ಅಸ್ತವ್ಯಸ್ತವಾಗಿದೆ, ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತಲೇ ಇದ್ದು, ನಮ್ಮ ಆರೋಗ್ಯಕ್ಕೆ ನಾವೇ ಹೊಣೆ!

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನವು ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇಂದು ಕೂಡ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜಧಾನಿಯಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 21°C ದಾಖಲಾಗುವ ಸಾಧ್ಯತೆ ಇದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಿರಲಿದೆ. ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲು ಕಡು ತೀವ್ರವಾಗಿರಲಿದ್ದು, ತಾಪಮಾನವು 38°C ರಿಂದ 40°C ಗಡಿ ತಲುಪುವ ಸಾಧ್ಯತೆ ಇದೆ. ಹೀಗಾಗಿ ‘ಹೀಟ್ ವೇವ್’ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಆರೋಗ್ಯ ಹೇಗೆ ರಕ್ಷಿಸೋದು?
ಮಧ್ಯಾಹ್ನದ ಬಿಸಿಲಿನಲ್ಲಿ ಓಡಾಡೋದನ್ನು ಆದಷ್ಟು ತಪ್ಪಿಸಿ. ದಿನಕ್ಕೆ ಮೂರು ಲೀಟರ್‌ ನೀರು ಕುಡಿಯಿರಿ, ಹೈಡ್ರೇಟ್‌ ಆಗುವಂಥ ತರಕಾರಿ, ಹಣ್ಣುಗಳನ್ನು ಸೇವಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !