Tuesday, December 16, 2025

SHOCKING | ಅತಿ ಹೆಚ್ಚು ಅಪಘಾತಕ್ಕೀಡಾಗೋರು ಗಾಡಿಲಿ ಕೂರೋರಲ್ಲ! ನಡ್ಕೊಂಡು ಹೋಗೋರಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಗಾಡಿ ಕೊಳ್ಳೋರ ಸಂಖ್ಯೆ ಹೆಚ್ಚಾಗಿದೆ. ವಾಹನಗಳು ಹೆಚ್ಚಾದಂತೆ ಅಪಘಾತದ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಪಾದಚಾರಿಗಳು ರಸ್ತೆ ಅವಘಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿದ್ದಾರೆ.

ನಗರದಲ್ಲಿ ನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹಾಗಾಗಿ ನಗರದಲ್ಲಿ ವಾಹನಗಳ ಸಂಖ್ಯೆ 1.25 ಕೋಟಿಯ ಗಡಿ ದಾಟಿದೆ. ಈ ಪೈಕಿ ಶೇ.70ರಷ್ಟು ದ್ವಿಚಕ್ರ ವಾಹನಗಳಿವೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಕಾರುಗಳು ಓಡಾಡುತ್ತಿವೆ.

ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ನಡುವಿನ ಅನುಪಾತ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹೀಗಾಗಿ ಸಂಚಾರ ಕಷ್ಟ ಸಾಧ್ಯವಾಗುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಅದರಲ್ಲೂ ಪಾದಚಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅಪಘಾತ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡರೂ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅತಿ ವೇಗದ ಸಂಚಾರದಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಬೆಂಗಳೂರಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನಲ್ಲಿ ಪಾದಚಾರಿಗಳ ಸಾವೇ ಹೆಚ್ಚಾಗಿದೆ. 2024ರಲ್ಲಿ ಸಂಭವಿಸಿದ ರಸ್ತೆ ಅಫಘಾತಗಳಲ್ಲಿ ಮೃತರಾದ ಒಟ್ಟು 894 ಮಂದಿ ಪೈಕಿ 246 ಮಂದಿ ಪಾದಚಾರಿಗಳಾಗಿದ್ದಾರೆ. ಅಂದರೆ ಒಟ್ಟು ಮೃತರ ಪೈಕಿ 27.50% ಪಾದಚಾರಿಗಳಾಗಿದ್ದಾರೆ. ಇನ್ಕು 2025ರಲ್ಲಿ ಅಕ್ಟೋಬರ್ ವರೆಗೆ ನಡೆದ ರಸ್ತೆ ಅವಘಡಗಳಲ್ಲಿ ಮೃತರಾದ 715 ಮಂದಿ ಪೈಕಿ 203 ಮಂದಿ ಪಾದಚಾರಿಗಳಾಗಿದ್ದಾರೆ.‌ ಅಂದರೆ ಒಟ್ಟು ಮೃತರ ಪೈಕಿ 28% ಪಾದಚಾರಿಗಳಾಗಿದ್ದಾರೆ ಎಂದು ಗೃಹ ಇಲಾಖೆ ಅಂಕಿ – ಅಂಶ ನೀಡಿದೆ.

error: Content is protected !!