Sunday, January 11, 2026

ಬಯಲಾಯ್ತು ಬುಲೆಟ್ ರಹಸ್ಯ: ಕಾಂಗ್ರೆಸ್ ಕಾರ್ಯಕರ್ತನ ದೇಹ ಸೀಳಿದ್ದು ಸತೀಶ ರೆಡ್ಡಿ ಗನ್ ಮ್ಯಾನ್ ಗುಂಡು!

ಹೊಸದಿಗಂತ ವರದಿ ಬಳ್ಳಾರಿ:

ಬ್ಯಾನರ್ ವಿಷಯದಲ್ಲಿ ಸಂಭವಿಸಿದ ಗಲಾಟೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತನೋರ್ವ ಸಾವನ್ನಪ್ಪಿರುವ ಪ್ರಕರಣಕ್ಕೆಮಹತ್ವದ ತಿರುವು ಸಿಕ್ಕಿದ್ದು ತನಿಖಾ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ನಾರಾ ಭರತ ರೆಡ್ಡಿ ಆಪ್ತ ಸತೀಶ ರೆಡ್ಡಿ ಅವರ ಇಬ್ಬರು ಗನ್ ಮ್ಯಾನ್ ರನ್ನು ವಶಕ್ಕೆ ಪಡೆಯಲಾಗಿದೆ.

ಓರ್ವನ ಸಾವಿಗೆ ಕಾರಣವಾದ ಗುಂಡಿನ ತನಿಖೆಯ ಎಫ್.ಎಸ್.ಎಲ್ ವರದಿ ಈಗ ಬಂದಿದ್ದು ದೇಹ ಹೊಕ್ಕ ಗುಂಡು ಸತೀಶ ರೆಡ್ಡಿ ಅಂಗರಕ್ಷಕನ ಬಂದೂಕಿನ ಗುಂಡಿನೊಂದಿಗೆ ನಿಖರ ಹೋಲಿಕೆ ಆಗಿದೆ ಎಂದು ವರದಿ ಬಂದಿದೆ.

ಈ ಹಿನ್ನೆಲೆಯಲ್ಲಿ ಕೊಲೆಗೆ ಕಾರಣವಾದ ಗುಂಡು ಯಾರ ಬಂದೂಕಿನಿಂದ ಸಿಡಿದಿದ್ದು ಎನ್ನುವ ಮಾಹಿತಿ ದೃಡಪಟ್ಟಂತಾಗಿದೆ. ಬಳ್ಳಾರಿ ಬ್ರೂಸ್ ಠಾಣೆ ಪೊಲೀಸರು ಇಬ್ಬರು ಖಾಸಗಿ ಗನ್ ಮ್ಯಾನ್ ಗಳಾದ ಗುರುಚರಣ್ ಸಿಂಗ್ ಹಾಗೂ ಬಲ್ಜಿತ್ ಸಿಂಗ್ ರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು ಪ್ರಕರಣ ರಾಜ್ಯದಲ್ಲಿ ವಿವಾದದ ಕಿಚ್ಚು ಹೊತ್ತಿಸಿದೆ.

error: Content is protected !!