ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದ ಆರಂಭದಿಂದಲೂ ಮೊಟ್ಟೆದರ ಗಣನೀಯವಾಗಿ ಏರಿಕೆಯತ್ತ ಸಾಗಿದ್ದು ಇದೀಗ ಮೊಟ್ಟೆ ದರ ಶತಕದ ಗಡಿದಾಟುವ ಮುನ್ಸೂಚನೆ ನೀಡಿದೆ. ಚಳಿಗಾಲದಲ್ಲಿ ಜನ ಹೆಚ್ಚಾಗಿ ಮೊಟ್ಟೆ ಸೇವನೆ ಮಾಡುತ್ತಾರೆ. ಇನ್ನು ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಬರುವ ಕಾರಣ ಕೇಕ್‌ಗಳಿಗೆ ಮೊಟ್ಟೆ ಬಳಕೆ ಮಾಡಲಾಗುತ್ತದೆ.
ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಅಧಿಕವಾಗಿರುವ ಹಿನ್ನಲೆಯಲ್ಲಿ ಮೊಟ್ಟೆಗಳ ದರ ನೂರು ರೂಪಾಯಿ ಗಡಿದಾಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಉತ್ತರ ಭಾರತದಲ್ಲಿ ಮೊಟ್ಟೆಗಳ ದರ ಗಣನೀಯವಾಗಿ ಏರಿಕೆಯಾಗಿದ್ದು, ಈ ಬಾರಿ ದರಗಳು ನೂರು ರೂಪಾಯಿ ಗಡಿದಾಟುನ ಮುನ್ಸೂಟನೆ ನೀಡಿವೆ.
ಚಳಿಗಾಲದಲ್ಲಿ, ಹಲವಾರು ರಾಜ್ಯಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮೊಟ್ಟೆಯ ಬಳಕೆ ಹೆಚ್ಚಾಗುತ್ತದೆ. ಆದಾಗ್ಯೂ, ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ.
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೊಟ್ಟಗಳ ದರ 100 ರೂ ಗಡಿಯತ್ತ ಸಾಗಿದ್ದು, ಕಳೆದ ಹದಿನೈದು ದಿನಗಳಿಂದ ಮುಂಬೈ ಮಹಾನಗರ ಪ್ರದೇಶದಲ್ಲಿ ಮೊಟ್ಟೆಯ ಬೆಲೆಗಳು ಪ್ರತಿ ಡಜನ್‌ಗೆ 98–100 ರೂ.ಗಳಿಗೆ ಏರಿವೆ ಎಂದು ವ್ಯಾಪಾರಿಗಳು ಮತ್ತು ಉದ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಮೊಟ್ಟೆಗಳ ಸಂಘ ಪ್ರಕಾರ, ಚಳಿಗಾಲದಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಪೂರೈಕೆ ಕಡಿಮೆಯಾಗುತ್ತದೆ. ಶೀತ ಪರಿಸ್ಥಿತಿಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ನಗರಕ್ಕೆ ಮೊಟ್ಟೆಯ ಪೂರೈಕೆ ಸುಮಾರು 15–20 ಪ್ರತಿಶತದಷ್ಟು ಕಡಿಮೆಯಾಗಿದೆ.

