March 1, 2026
Sunday, March 1, 2026
spot_img

ಗ್ರಹಣ ಕಾಲದಲ್ಲೂ ರಾಯರ ದರುಶನ ಭಾಗ್ಯ: ಮಂತ್ರಾಲಯ ಮಠದಿಂದ ಮಹತ್ವದ ಪ್ರಕಟಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಾರ್ಚ್ 3ರಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳು ಬಾಗಿಲು ಮುಚ್ಚಲಿವೆ. ಆದರೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಾತ್ರ ಭಕ್ತರಿಗಾಗಿ ತೆರೆದಿರಲಿದ್ದು, ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ಗ್ರಹಣದ ಅವಧಿಯಲ್ಲಿ ಮಠದಲ್ಲಿ ಅನುಸರಿಸಲಾಗುವ ಪ್ರಮುಖ ಬದಲಾವಣೆಗಳು ಹೀಗಿವೆ:

ಗ್ರಹಣದ ಸಮಯದಲ್ಲೂ ಭಕ್ತರು ಎಂದಿನಂತೆ ರಾಯರ ದರ್ಶನ ಪಡೆಯಬಹುದು. ಮಠದ ನಿಗದಿತ ಸಮಯದ ಅವಧಿಯಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.

ಸೂರ್ಯೋದಯದ ನಂತರ ರಾಯರಿಗೆ ಯಾವುದೇ ವಿಶೇಷ ಅಲಂಕಾರ ಅಥವಾ ವಿಶೇಷ ಪೂಜೆಗಳು ಇರುವುದಿಲ್ಲ. ಕೇವಲ ಜಲಾಭಿಷೇಕ ಮಾತ್ರ ನೆರವೇರಿಸಲಾಗುತ್ತದೆ.

ಗ್ರಹಣ ಮುಗಿಯುವವರೆಗೂ ಸಾಮಾನ್ಯ ಪ್ರಸಾದ ವಿನಿಯೋಗ ಇರುವುದಿಲ್ಲ. ಭಕ್ತರಿಗೆ ಕೇವಲ ತೀರ್ಥ ಪ್ರಸಾದವನ್ನು ಮಾತ್ರ ನೀಡಲಾಗುತ್ತದೆ.

ಗ್ರಹಣದ ಪುಣ್ಯಕಾಲದಲ್ಲಿ ಮಠದ ವತಿಯಿಂದ ವಿಶೇಷ ಹೋಮಗಳನ್ನು ಆಯೋಜಿಸಲಾಗಿದ್ದು, ಆಸಕ್ತ ಭಕ್ತರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ದೇವಸ್ಥಾನಗಳನ್ನು ಮುಚ್ಚುವ ಸಂಪ್ರದಾಯವಿದ್ದರೂ, ಮಂತ್ರಾಲಯದಲ್ಲಿ ಭಕ್ತರ ಹಿತದೃಷ್ಟಿಯಿಂದ ದರ್ಶನಕ್ಕೆ ಮುಕ್ತ ಅವಕಾಶ ನೀಡಿರುವುದು ವಿಶೇಷವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !