February 27, 2026
Friday, February 27, 2026
spot_img

ಉದ್ಯೋಗಾಕಾಂಕ್ಷಿಗಳ ನೋವು ಹೇಳತೀರದು, ಪ್ರಧಾನಿ-ರಾಜ್ಯಪಾಲರಿಗೆ ಪತ್ರ ಬರೆದ ಅರವಿಂದ ಬೆಲ್ಲದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಓದಿ ಪರೀಕ್ಷೆಗಾಗಿ ಕಾಯುತ್ತಿದ್ದಾರೆ. ಆದರೆ ಸರ್ಕಾರದ ಕಡೆಯಿಂದ ಯಾವುದೇ ಉದ್ಯೋಗಾಕವಕಾಶ ಸಿಕ್ಕಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹಲೋಟ್‌ಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಪತ್ರ ಬರೆದಿದ್ದಾರೆ.

ಉದ್ಯೋಗಾಂಕ್ಷಿಗಳ ನೋವನ್ನು ಪತ್ರದ ಮೂಲಕ ಪ್ರಧಾನಿಗೆ ತಲುಪಿಸಿದ್ದಾರೆ. ರಾಜ್ಯ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಲಕ್ಷಾಂತರ ಯುವಕರು ಹತಾಶೆಯಿಂದ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಪ ಕಾಣುತ್ತಿದೆ. ನಾವು ಉದ್ಯೋಗಾಕಾಂಕ್ಷಿಗಳ ಬೇಡಿಕೆಗಾಗಿ ಅವರ ಜೊತೆ ನಿಂತು ಬೆಂಬಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾದ ಸರ್ಕಾರ ಯುವಕರ ಮೇಲೆ ಲಾಠಿ ಚಾರ್ಜ್‌ ಮಾಡಿದೆ. ಯುವಕರ ಪರಿಶ್ರಮಕ್ಕೆ ಬೆಲೆ ಇಲ್ಲವಾ? ಅವರಿಗೆ ಅನ್ಯಾಯವಾಗೋದನ್ನು ನೋಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !