ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಲು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ 11 ದಿನಗಳಲ್ಲಿ ದಾಖಲೆ ಮೊತ್ತದ ಗಳಿಕೆ ಮಾಡಿದೆ.
ರಿಷಬ್ ಶೆಟ್ಟಿ ಸತತ ಮೂರು ವರ್ಷಗಳ ಕಾಲ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ತಮ್ಮ ತಂಡದೊಂದಿಗೆ ಅವಿರತವಾಗಿ ದುಡಿದಿದ್ದಾರೆ. ಈ ಬಗ್ಗೆ ಅವರೇ ಕೆಲವೆಡೆ ಹೇಳಿಕೊಂಡಿದ್ದಾರೆ. ಇನ್ನು ಕ್ಲೈಮಾಕ್ಸ್ ಶೂಟಿಂಗ್ ವೇಳೆ ತಮ್ಮ ಕಾಲುಗಳು ಹೇಗಾಗಿತ್ತು ಎನ್ನುವ ಪೋಟೊವನ್ನು ರಿಷಭ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಕಾಲುಗಳು ಊದಿಕೊಂಡು ಇಡೀ ದೇಹವೇ ನಿತ್ರಾಣವಾಗಿತ್ತು. ಆದರೂ ಶೂಟಿಂಗ್ ನಿಲ್ಲಲಿಲ್ಲ. ಅರಣ್ಯ ಪ್ರದೇಶದಲ್ಲಿ ವಿಷಮ ಪರಿಸ್ಥಿತಿಗಳಲ್ಲಿ, ಮೇಕಪ್ ಧರಿಸಿ ಗಂಟೆ ಗಟ್ಟಲೆ ನಡೆದೇ ಶೂಟಿಂಗ್ ಸ್ಥಳ ಸೇರಬೇಕಿತ್ತು. ಅಂದು ಅಷ್ಟೆಲ್ಲಾ ಕಷ್ಟಪಟ್ಟದ್ದಕ್ಕೂ ಸಾರ್ಥಕ. ನಮ್ಮ ಸಿನಿಮಾವನ್ನು ನೀವು ಮೆಚ್ಚಿದ್ದೀರಿ. ನಮ್ಮ ಶ್ರಮಕ್ಕೆ ಫಲ ದೊರೆತಿದೆ ಎಂದಿದ್ದಾರೆ.
ʼಊದಿದ ಕಾಲುಗಳ ನೋವು ಈಗಿಲ್ಲ, ಕಾಂತಾರ ಸಕ್ಸಸ್‌ನಿಂದ ಎಲ್ಲವೂ ಮರೆತುಹೋಯ್ತು!ʼ
